ಕೊಪ್ಪಳ : ಹನುಮ ವ್ರತದ ಅಂಗವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತ ಸಾಗರವೇ ಹರಿದು ಬಂದಿದೆ.
ಹನುಮ ಜನ್ಮಸ್ಥಳವೆಂದು ಪ್ರಸಿದ್ಧವಾಗಿರುವ ಅಂಜನಾದ್ರಿಗೆ ಇಂದು ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀ ಅಂಜನೇಯನ ದರ್ಶನ ಪಡೆದರು. ಹನುಮ ಮಾಲೆ ಧರಿಸಿದ್ದ ಭಕ್ತರು ಇಂದು ಮಾಲೆ ವಿಸರ್ಜನೆ ಮಾಡಿದ್ದು, ಧಾರ್ಮಿಕ ಭಾವನೆಗಳಿಂದ ಸ್ಥಳ ಕಂಗೊಳಿಸಿತು.
ಬೆಳಗ್ಗಿನಿಂದಲೇ 575 ಮೆಟ್ಟಿಲುಗಳನ್ನು ಏರಿ ಭಕ್ತರು ಅಂಜನೇಯ ದರ್ಶನ ಪಡೆಯುತ್ತಿದ್ದು, ಜೈ ರಾಮ ಘೋಷಣೆಗಳು ಅಂಜನಾದ್ರಿ ಪರ್ವತದಾದ್ಯಂತ ಮೊಳಗಿದವು. ವಿಶೇಷ ಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ದಿನಪೂರ್ತಿ ನಡೆಯುತ್ತಿವೆ.
ಹನುಮ ವ್ರತದ ಹಿನ್ನೆಲೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದನ್ನೂ ಓದಿ : ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಬೆಂಗಳೂರು ಕರಗ


















