ರಾಮನಗರ : ವೃದ್ಧೆಗೂ-ಮಂಗನಿಗೂ ಜನ್ಮ.. ಜನ್ಮದ ಬಂಧನ. ಹೌದು.. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆಶ್ಚರ್ಯಕರ ಸಂಗತಿಯೊಂದು ನಡೆದಿದ್ದು, ಮೃತ ವೃದ್ಧೆಯನ್ನ ತಬ್ಬಿ ಕೋತಿಯೊಂದು ಮುದ್ದಾಡಿ ಕಣ್ಣೀರು ಹಾಕಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಪಾರ್ವತಮ್ಮ (80) ಹೃದಯಾಘಾತದಿಂದ ಸಾವನ್ನಪ್ಪಿದ ವೃದ್ದೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದವರಾದ ಪಾರ್ವತಮ್ಮ, ರಾಮನಗರದ ರಾಯರದೊಡ್ಡಿಯಲ್ಲಿನ ಮಗಳ ಮನೆಯಲ್ಲಿದ್ದರು. ಈ ವೇಳ ಹೃದತಯಾಘಾತದಿಂದ ವೃದ್ದೆ ಕೊನೆಯುಸಿರೆಲೆದಿದ್ದರು.
ಈ ವೇಳೆ ಇಷ್ಟು ವರ್ಷದಲ್ಲಿ ಇಲ್ಲದ ಮಂಗವೊಂದು ಪಾರ್ವತಮ್ಮನ ಸಾವಿನ ಬಳಿಕ ದಿಢೀರನೇ ಪ್ರತ್ಯಕ್ಷವಾಗಿ ಮೃತದೇಹವನ್ನು ನೋಡಿ ಕಂಬನಿ ಹಾಕಿದೆ. ಮಂಗನ ಚಟುವಟಿಕೆ ನೋಡಿ ಅಲ್ಲಿದ್ದ ಜನರು ಬೆರಗಾಗಿದ್ದಾರೆ. ಸದ್ಯ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ : “ವಿರಾಟ್ ಯಾವಾಗಲೂ ನನ್ನ ಕಾಲೆಳೆಯುತ್ತಾರೆ” – ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹೇಳಿದ ಸತ್ಯ



















