ಉಡುಪಿ | ಗ್ರಾಮೀಣ ಭಾಗದ ಮಕ್ಕಳಿಗೆ ಸುರಕ್ಷಿತ ಮತ್ತು ಸುಲಭ ಸಾರಿಗೆಯನ್ನು ಒದಗಿಸುವ ಮೂಲಕ ಶಾಲಾ ದಾಖಲಾತಿಯನ್ನು ಹೆಚ್ಚಿಸಲು, ಶೃಂಗೇರಿ ಶ್ರೀ ಶಾರದಾ ಪೀಠದ ವತಿಯಿಂದ ಕುಂದಾಪುರ ತಾಲೂಕಿನ ಬೈಂದೂರು ವಲಯದ ಬಡಾಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಸ್ ನೀಡಲಾಯಿತು. ಈ ಬಸ್ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಶ್ರೀ ಶಾರದಾ ಪ್ರಸಾದ ರೂಪದಲ್ಲಿ ತಮ್ಮ ಅನುಗ್ರಹದಿಂದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ವರ್ಧಂತಿಯ ಸಂದರ್ಭದಲ್ಲಿ ಸಮರ್ಪಿಸಿದರು.

ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು, ವೇ.ಮೂ. ಲೋಕೇಶ ಆಡಿಗ, ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ, ಮತ್ತು ನಾಗ ಪಾತ್ರಿಗಳು ಬಡಾಕರೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಹೊಸ ಶಾಲಾ ಬಸ್ ಹಾಗೂ ಕೀಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಟಿ. ಮಂಜು, ಅನುರಾಧ ಗುರುರಾಜ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾಗೇಶ್ ಎಂ. ನಾಯಕ್, ಶಿಕ್ಷಣ ಸಂಯೋಜಕರು ಸತ್ಯನಾರಾಯಣ ಕೊಡೆರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಧರ ದೇವಾಡಿಗ, ಮುಖ್ಯ ಶಿಕ್ಷಕಿ ರಶ್ಮಿ ಪಿ.ಸಿ. ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಜೆಪಿ ಬಡಾಕೆರೆ, ನಾಗರಾಜ್ ಮಯ್ಯ, ಗುಜ್ಜಾಡಿ ಅರುಣ್ ಹಕ್ಲಾಡಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಉಡುಪಿ ಅತೀ ಶೀಘ್ರದಲ್ಲೇ ಪೂರ್ಣ ಸಾಕ್ಷರ ಜಿಲ್ಲೆ – ಘೋಷಣೆಯೊಂದೇ ಬಾಕಿ



















