ಹುಬ್ಬಳ್ಳಿ: ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗಿದ್ದು, ವಾಹನ ಸವಾರರಿಗೆ ಮತ್ತೊಮ್ಮೆ ಬೆಲೆಭಾರ ಎದುರಾಗಿದೆ. ಕಳೆದ 15 ದಿನಗಳಲ್ಲಿ ಇದು ಮೂರನೇ ಬಾರಿ ದರ ಏರಿಕೆಯಾಗಿದ್ದು, ಪ್ರಿಮಿಯಂ ಮಾತ್ರವಲ್ಲದೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಹೆಚ್ಚಳ ಕಂಡುಬಂದಿದೆ.
ಶೆಲ್ ಬಂಕ್‌ಗಳಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!
ಈಗ ಶೆಲ್ ಬಂಕ್‌ಗಳಲ್ಲಿ ಸಾಮಾನ್ಯ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 112 ರೂಪಾಯಿ ತಲುಪಿದೆ. ಕಳೆದ ಕೆಲವು ದಿನಗಳ ಹಿಂದೆ ಇದು 106 ರೂಪಾಯಿಯಿತ್ತು. ನಂತರ 108.50 ರೂಪಾಯಿಗೆ ಏರಿಕೆಯಾಗಿತ್ತು. ಈಗ ಮತ್ತೆ 112 ರೂಪಾಯಿಗೆ ತಲುಪಿದೆ. ಇದು ವಾಹನ ಸವಾರರಿಗೆ ದೊಡ್ಡ ಹೊರೆಯಾಗಿದೆ. ಡೀಸೆಲ್ ದರವೂ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವಾರ 91 ರೂಪಾಯಿಯಿತ್ತು. ನಂತರ 93.50 ರೂಪಾಯಿಗೆ ಏರಿಕೆಯಾಗಿತ್ತು. ಈಗ 98 ರೂಪಾಯಿ ತಲುಪಿದೆ. ಪ್ರಿಮಿಯಂ ಇಂಧನದ ಬೆಲೆ ಏರಿಕೆಯಾಗಿದೆ. ಪ್ರಿಮಿಯಂ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 122.42 ರೂಪಾಯಿ ಆಗಿದೆ. ಪ್ರಿಮಿಯಂ ಡೀಸೆಲ್ ದರ 108.50 ರೂಪಾಯಿ ಆಗಿದೆ.
ಶೆಲ್ ಕಂಪನಿ ಮೊದಲು ದರ ಏರಿಸಿತು. ಈಗ ಮತ್ತೆ ಏರಿಕೆ ಮಾಡಿದೆ. ಇದು ಖಾಸಗಿ ಕಂಪನಿಗಳು ತಮ್ಮ ಲಾಭ-ನಷ್ಟ ಲೆಕ್ಕ ಹಾಕಿ ದರ ನಿಗದಿಪಡಿಸುತ್ತಿರುವುದನ್ನು ತೋರಿಸುತ್ತಿದೆ. ಸರ್ಕಾರಿ ಕಂಪನಿಗಳಲ್ಲಿ ಇನ್ನೂ ದರ ಸ್ಥಿರವಾಗಿದೆ. ಜಾಗತಿಕ ಯುದ್ಧದ ಪರಿಣಾಮವಾಗಿ ಇಂಧನ ಬೆಲೆಗಳು ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಜೀವನಕ್ಕೆ ತೊಂದರೆ ತರುತ್ತಿದೆ. ಸರ್ಕಾರವು ಇಂಧನ ಬೆಲೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಜನರ ಬೇಡಿಕೆಯಾಗಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ರೇಸಿಂಗ್ ಗ್ರಿಡ್‌ಗೆ ‘ಟೆನ್10’ ಭರ್ಜರಿ ಮರುಪ್ರವೇಶ!



















