ಬೆಂಗಳೂರು: ಐತಿಹಾಸಿಕ ಕರಗ ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಹೂವಿನ ದಂಡೆಯನ್ನ ಹೊತ್ತು ಸಾಗುವ ವಿಶ್ವವಿಖ್ಯಾತ ಕರಗ ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.

ಏಪ್ರಿಲ್ 1 ರ ಚೈತ್ರ ಪೌರ್ಣಮಿಯ ದಿನ ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿಯೂ ಎ. ಜ್ಞಾನೇಂದ್ರ, ಕರಗ ಹೊರಲಿದ್ದಾರೆ. ಈ ಬಾರಿಯ ಕರಗ ಉತ್ಸವವು ಹಲವು ವಿಶೇಷತೆಗಳಿಂದ ಕೂಡಿದ್ದು, ಮೈಸೂರು ದಸರಾದಂತೆ ಕರಗದಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ.
ಲೈಟಿಂಗ್ಸ್ ಗಳಿಂದ ಧರ್ಮರಾಯ ದೇವಸ್ಥಾನದ ಬೀದಿಗಳು, ಕರಗ ಸಾಗಿ ಹೋಗುವ ರಸ್ತೆಗಳಾದ ಜೆಸಿ ರಸ್ತೆ, ಕಾರ್ಪೋರೇಶನ್ ರಸ್ತೆ, GBA ಕಚೇರಿ ಆವರಣ, ಎಸ್ಪಿ ರಸ್ತೆ, ಅವೆನ್ಯೂ ರಸ್ತೆ, ಕೆ.ಆರ್ ಮಾರ್ಕೆಟ್, ಹಡ್ಸನ್ ಸರ್ಕಲ್, ಹಲಸೂರು ಗೇಟ್ ಸರ್ಕಲ್ ನಲ್ಲಿ, ಕಾರ್ಪೊರೇಷನ್ ಸರ್ಕಲ್ ಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ದೀಪಾಲಂಕಾರ ನೋಡುವಗರ ಕಣ್ಮನ ಸೆಳೆಯುತ್ತಿದೆ.



















