ಬಾಗಲಕೋಟೆ: ಈಗಲೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಪಕ್ಷದ ನಾಯಕರೇ. ನಾವು ಅವರು ನಮ್ಮ ನಾಯಕರು ಅಂತ ಒಪ್ಪಿಕೊಂಡಿದ್ದೇವೆ ಎಂದು ಬಿಜೆಪಿ ನಾಯಕ ಬಿ. ಶ್ರೀರಾಮುಲು ಹೇಳಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಾವು ಯತ್ನಾಳ್ ಅವರನ್ನು ನಮ್ಮ ಪಕ್ಷದ ನಾಯಕರು ಅಂತ ಒಪ್ಪಿಕೊಂಡಿದ್ದೇವೆ. ಅವರ ಜೊತೆಗೆ ಕೆಲಸ ಮಾಡೋಕೆ ರೆಡಿ ಇದ್ದೀವೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಯತ್ನಾಳ್ ಬರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಯತ್ನಾಳ್ ಅವರು ಈ ಭಾಗದ ನಾಯಕರಿದ್ದಾರೆ. ಅವರು ಪ್ರಚಾರಕ್ಕೆ ಬರೋದ್ರಲ್ಲಿ ಯಾವುದೇ ತಪ್ಪಿಲ್ಲ. ಒಟ್ಟಿನಲ್ಲಿ ಇಂದು ಹಿಂದುತ್ವ ಉಳಿಸುವ ಕೆಲಸ ಆಗಬೇಕು. ಹಾಗಾಗಿ ಬಾಗಲಕೋಟೆಯಲ್ಲಿ ಭಾಗವಾತ್ ಧ್ವಜ ಹಾರಿಸೋಣ, ಬಿಜೆಪಿಯ ಕಮಲವನ್ನು ಅರಳಿಸೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಳ್ಳಿಗಳಲ್ಲಿ 45 ದಿನಕ್ಕೊಂದು LPG ಸಿಲಿಂಡರ್ ವಿತರಣೆ – ಕೆ.ಹೆಚ್.ಮುನಿಯಪ್ಪ



















