ಬೆಂಗಳೂರು: ಒನ್‌ವೇ ಮಾರ್ಗದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಸಂಭವಿಸಿದ ದುರಂತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ಬೆಂಗಳೂರಿನ ವಕ್ಫ ಬೋರ್ಡ್ ಬಳಿ ನಡೆದಿದೆ.
ವೋಗ್ಸ್ ವ್ಯಾಗನ್ ಕಾರಿನಲ್ಲಿ ಒನ್‌ವೇ ನಿಯಮ ಉಲ್ಲಂಘಿಸಿ ಚಾಲನೆ ಮಾಡುತ್ತಿದ್ದ ಅಯ್ಯಪ್ಪ ಎಂಬ ವ್ಯಕ್ತಿಯ ವಾಹನವು ಬೈಕ್‌ನಲ್ಲಿ ಸಾಗುತ್ತಿದ್ದ ಜುಬೇರ್ ಅಹಮದ್ (42) ಮತ್ತು ಅಬ್ದುಲ್ ಮುನ್ವಿರ್ ಪಾಷಾ (16) ರನ್ನು ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ತನಿಖೆ ನಡೆಸಿದ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ಕಾರಿನ ಚಾಲಕ ಮಧ್ಯ ಸೇವನೆ ಮಾಡಿರುವುದು ಪತ್ತೆಯಾಗಿದ್ದು, ಅಯ್ಯಪ್ಪನನ್ನು ವಶಕ್ಕೆ ಪಡೆದಿರುವುದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ – ಎದುರು ಮನೆಯವರ ವಿರುದ್ದ ಗಂಭೀರ ಆರೋಪ


















