ಬಾಗಲಕೋಟೆ: ಬಾಗಲಕೋಟೆಯಲ್ಲಿ ಉಪಚುನಾವಣೆಯ ಅಖಾಡ ರಂಗೇರಿದ್ದು,ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಪ್ರಚಾರ ಮಾಡುತ್ತಿದ್ದಾರೆ.
ಬಾಗಲಕೋಟೆ ಕ್ಷೇತ್ರದ ಶಿರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಪ್ರಚಾರ ಮಾಡುತ್ತಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಜನ ಬೆಂಬಲ ಕೊಡುತ್ತಿದ್ದಾರೆ. ಉಪ ಚುನಾವಣೆಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅನ್ನೋದನ್ನ ಕಲಿಯೋಕೆ ನಮಗೂ ಕೂಡ ಒಂದು ಅವಕಾಶ ಸಿಕ್ಕಿದೆ ಎಂದಿದ್ದಾರೆ.
ಇನ್ನು ಇದೇ ವೇಳೆ ಸತೀಶ್ ಜಾರಕಿಹೊಳಿ ಸೀಸನಲ್ ಪೋಲಿಟಿಷಿಯನ ಎಂದಿದ್ದ ಶ್ರೀರಾಮುಲುಗೆ ಹೇಳಿಕೆಗೆ ಪ್ರತಿಕ್ರಿಯರ ನೀಡಿದ ರಾಹುಲ್, ಶ್ರೀರಾಮುಲು ನಮ್ಮ ಸಮುದಾಯದ ಹಿರಿಯ ಮುಖಂಡರು. ಸತೀಶ್ ಜಾರಕಿಹೊಳಿ ಕೊಡುಗೆ ಸಮಾಜಕ್ಕೆ ಏನಿದೆ ಅಂತ ಜನರಿಗೆ ಗೊತ್ತಿದೆ. ಅನೇಕ ಕಾರ್ಯಕರ್ತರು, ಮುಖಂಡರು ಜಾರಕಿಹೊಳಿ ಹಿಂದೆ ನಿಂತಿದ್ದಾರೆ ಅಂದ್ರೆ ಹಾಗೆ ನಿಂತಿಲ್ಲ. ಅವರ ಕೊಡುಗೆ ಮತ್ತು ಸೇವೆ ನೋಡಿ ಜನ ಬೆಂಬಲಕ್ಕೆ ನಿಂತಿದ್ದಾರೆ. ಜನರು ಜಾಣರಿದ್ದಾರೆ, ಯಾವ ನಾಯಕರ ಹಿಂದೆ ನಿಂತ್ರೆ, ಸಮಾಜಕ್ಕೆ ಅನುಕೂಲ ಅನ್ನೋದು ಗೊತ್ತಿದೆ..ಹೀಗಾಗಿ ತಂದೆ ಸತೀಶ್ ಅವರು ಸಮಾಜದ ಜೊತೆ ನಿಂತಿದ್ದಾರೆಎಂದು ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ಚುನಾವಣೆ ಸ್ಟಾಟರ್ಜಿ ಹೇಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಕ್ಷೇತ್ರದಲ್ಲಿ ಬೇರೆ ಬೇರೆ ಸ್ಟಾಟರ್ಜಿ ಅಪ್ಲೈ ಮಾಡಬೇಕಾಗುತ್ತದೆ.
ಸತೀಶ್ ಜಾರಕಿಹೊಳಿ ಅವರು ಇಂದು ಬರ್ತಿದ್ದಾರೆ. ಆಂತರಿಕ ವಿಚಾರಗಳನ್ನ ವಿವಿಧ ರೀತಿಯಲ್ಲಿ ಮಾಡ್ತಾರೆ ಎಂದಿದ್ದಾರೆ.
ಚುನಾವಣೆ ಸಮಯದಲ್ಲಿ ಅನುಧಾನ ಘೋಷಣೆ ವಿಚಾರವಾಗಿ ಮಾತನಾಡಿ,ಎಲ್ಲ ಅನುಧಾನಗಳು ಅಧಿಕೃತವಾಗಿ ಘೋಷಣೆ ಆಗಿವೆ.. ಜನರು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದಕ್ಕೆ ಸ್ಪಂದಿಸುವ ಕೆಲಸ ಆಗಿದೆ. ಎಲ್ಲಿಲ್ಲಿ ಸಮಸ್ಯೆಗಳು ಇವೆ ಅಂತಹ ಕಡೆಗಳಲ್ಲಿ, ತಮ್ಮ ಇಲಾಖೆ ಅಥವಾ ಸರ್ಕಾರದ ಮಟ್ಟದಲ್ಲಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಇದು ಕೇವಲ ಬಾಗಲಕೋಟೆ ಮತಕ್ಷೇತ್ರದಲ್ಲಿ ಸೀಮಿತ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಈ ಕೆಲಸ ನಡೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಚಾರದ ವೇಳೆ ಹೈಡ್ರಾಮಾ.. ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು!



















