ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ದಾವಣಗೆರೆಯಲ್ಲಿ ಮಗ ಸಮರ್ಥ ಪರವಾಗಿ ಸಂಸದೆ ಡಾ,ಪ್ರಭಾ ಮಲ್ಲಿಕಾರ್ಜುನ ಮತಯಾಚನೆಗಿಳಿದಿದ್ದಾರೆ

ನಾಗನೂರು ಗ್ರಾಮದಲ್ಲಿ ಪ್ರಭಾ ಮತಯಾಚನೆ ಮಾಡುತ್ತಿದ್ದಾರೆ. ಅವರ ತಾತನವರಿಗೆ ಮಾಡಿದ ಸಪೋರ್ಟ್ ಅವರ ಮೊಮ್ಮಗ ಸಮರ್ಥಗೆ ಮಾಡಿ ಎಂದು ಪ್ರಜೆಗಳಲ್ಲಿ ಮನವಿ ಮಾಡಿದ್ದಾರೆ.
ನಾಗನೂರು ಗ್ರಾಮವನ್ನು ದಿ ಶಿವಶಂಕ್ರಪ್ಪನವರು ಬಹಳ ಅಭಿವೃದ್ಧಿ ಮಾಡಿದ್ದಾರೆ. ಸಮರ್ಥ ಶ್ಯಾಮನೂರು ಅವರನ್ನು ಹೆಚ್ಚಿನ ಮತಗಳಲ್ಲಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿದೆ. ಮೊದಲಿನಿಂದಲೂ ಈ ಗ್ರಾಮದ ಮತಗಳು 100 ಪರ್ಸೆಂಟ್ ನಮ್ಮ ಕುಟುಂಬಕ್ಕೆ ಬಂದಿವೆ. ಈಗಲೂ ಅದೇ ರೀತಿಯಲ್ಲಿ ಶ್ಯಾಮನೂರು ಸಮರ್ಥಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.


















