ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ನಗರದ ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ದಿನಗೂಲಿ ಮತ್ತು “ಡಿ” ದರ್ಜೆ ನೌಕರರ ಸಂಘವು ಇಂದು “ಮಾಡು ಇಲ್ಲವೇ ಮಡಿ” ಎಂಬ ಘೋಷ ವಾಕ್ಯದಡಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.

ದಿನಗೂಲಿ ಸೇವೆಯಿಂದ ಸಕ್ರಮ ಮಾಡಲಾದ ಎಲ್ಲಾ ಸಿಬ್ಬಂದಿಯವರಿಗೆ ಹಳೆಯ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ಸೌಲಭ್ಯ ಜಾರಿಗೊಳಿಸುವಂತೆ ಹಾಗೂ ಸಕ್ರಮಗೊಂಡ ದಿನಗೂಲಿ ನೌಕರರನ್ನು ಸೇವೆಯಿಂದ ಕೈ ಬಿಡದಂತೆ, ಸರ್ಕಾರ ಮತ್ತು ನ್ಯಾಯಾಲಯದ ಆದೇಶದಂತೆ ಉಳಿದ ದಿನಗೂಲಿ ನೌಕರರನ್ನು ಸಕ್ರಮಗೊಳಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಮಾಡಿ ಸಂಘವು ಮಾ.26ವರೆಗೆ ಗಡುವು ನೀಡಿತ್ತು.

ಆದರೆ, ತಮ್ಮ ಯಾವುದೇ ಬೇಡಿಕೆಗಳು ಈಡೇರಿಸದ ಕಾರಣ ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ದಿನಗೂಲಿ ಮತ್ತು “ಡಿ” ದರ್ಜೆ ನೌಕರರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.





ಇದನ್ನೂ ಓದಿ : ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸ್‌ಗೆ ಬಿಗ್ ಟ್ವಿಸ್ಟ್.. ರಿಕ್ಕಿ ರೈಗೆ ಮತ್ತೊಂದು ಸಂಕಷ್ಟ!



















