ಬೆಂಗಳೂರು : ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಕಾರು ಡ್ರಿಫ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ರಿಕ್ಕಿ ವಿರುದ್ಧ ಇದೀಗ ವಂಚನೆ ಕೇಸ್ ದಾಖಲಾಗಿದೆ.
ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಡ್ರಿಫ್ಟಿಂಗ್ ಮಾಡಿದ್ದ ಲ್ಯಾಂಬೋರ್ಗಿನಿ ಕಾರನ್ನ ರಿಜಿಸ್ಟರ್ ಮಾಡಿಸಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಖರೀದಿಸಿದ್ದ ಈ ಲ್ಯಾಂಬೋರ್ಗಿನಿ ಕಾರನ್ನು ಕರ್ನಾಟಕದಲ್ಲಿ ರಿಜಿಸ್ಟರ್ ಮಾಡಿಸಿಲ್ಲ. ಹಾಗೇ RTO ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಖರೀದಿ ಮಾಡಿ ಟ್ಯಾಕ್ಸ್ ಕಟ್ಟದೇ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಿಕ್ಕಿ ರೈ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಲ್ಯಾಂಬೋರ್ಗಿನಿ ಕಾರಿನಿಂದ ಅಪಾಯಕಾರಿ ಸ್ಟಂಟ್ ವಿರುದ್ಧ ಆಕ್ರೋಶದ ಬಳಿಕ ಪೊಲೀಸರು ರಿಕ್ಕಿ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲು ಮಾಡಿಕೊಂಡು ಕಾರು ಸೀಜ್ ಮಾಡಿದ್ದರು. ಆದ್ರೆ, ಹೈಕೋರ್ಟ್, ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಇದೀಗ ಕಾರಿನ ಮತ್ತೊಂದು ಕಳ್ಳಾಟ ಬಟಾಬಯಲಾಗಿದ್ದು, ರಿಕ್ಕಿ ರೈ ಮೇಲೆ ವಂಚನೆ ಕೇಸ್ ದಾಖಲಾಗಿದೆ.
ರಿಜಿಸ್ಟರ್ ಮಾಡಿಸದೇ ವಂಚನೆ
ದೆಹಲಿಯಲ್ಲಿ ಖರೀದಿಸಿದ್ದ ಕಾರು ರಿಜಿಸ್ಟರ್ ಮಾಡಿಸಿಲ್ಲ. RTO ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಖರೀದಿ ಮಾಡಿ ಟ್ಯಾಕ್ಸ್ ಕಟ್ಟದೇ ಕಾರಿಗೆ ಅಳವಡಿಕೆ ಮಾಡಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ದಾಖಲೆ ಪರಿಶೀಲನೆ ವೇಳೆ ಅಕ್ರಮ ಬಯಲಿಗೆ ಬಂದಿದೆ. ಡ್ರಿಫ್ಟಿಂಗ್ ಮಾಡಿದ ಮೊದಲ ದಿನ ಕಾರಿನ ನಂಬರ್ ಪತ್ತೆಯಾಗಿದ್ದರೂ ಸಹ ಕಾರಿನ ಮಾಲೀಕರು ಪತ್ತೆಯಾಗಿರಲಿಲ್ಲ. ದೆಹಲಿಯಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿರೋ ರಿಕ್ಕಿ ರೈ, ಅದಕ್ಕೆ ಹೊಸ ಕಲರ್ ಮಾಡಿಸಿದ್ದರು.ಆದ್ರೆ ಇಲ್ಲಿವರೆಗೂ ಅದನ್ನು ಬೆಂಗಳೂರಿನಲ್ಲಿ ರಿಜಿಸ್ಟರ್ ಮಾಡಿಸಿಲ್ಲ. ಜೊತೆಗೆ ತನ್ನ ಕಾರಿಗೆ ka 05 NR 0009 ನಂಬರ್ ನ ಫ್ಯಾನ್ಸಿ ನಂಬರ್ ಪಡೆದಿದ್ದಾರೆ. ಅದನ್ನು ಕೂಡ ರಿಜಿಸ್ಟರ್ ಮಾಡಿಸಿ ಅದಕ್ಕೆ ಟ್ಯಾಕ್ಸ್ ಕಟ್ಟಬೇಕಿದೆ. ಆದ್ರೆ, ಅದನ್ನೂ ಸಹ ಕಟ್ಟಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ನೀಡಿದ ದೂರಿನ ಅನ್ವಯ ಕಬ್ಬನ್ ಪಾರ್ಕ್ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಬಿ ಎನ್ ಎಸ್ 318(4) 304(2) 341 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಜಿಬಿಎ ಪೂರ್ವ ನಗರ ಪಾಲಿಕೆಯಿಂದ 3889 ಕೋಟಿ ಗಾತ್ರದ ಬಜೆಟ್ ಮಂಡನೆ – ಕಲ್ಯಾಣಕ್ಕೆ ವಿಶೇಷ ಆದ್ಯತೆ



















