ನೆಲಮಂಗಲ : ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಬೈಕ್ ರೈಡ್ ಮತ್ತು ವೀಲ್ಹಿಂಗ್ ನಡೆಸಿದ ಯುವಕರ ಹುಚ್ಚಾಟದಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ನೆಲಮಂಗಲ ಬಳಿಯ ದಾನೋಜಿಪಾಳ್ಯದ ಬಳಿ KA 02 KA9933 ಸಂಖ್ಯೆಯ ಡಿಯೋ ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಹೆಲ್ಮೆಟ್ ಧರಿಸದೆ ವೀಲ್ಹಿಂಗ್ ನಡೆಸಿದ್ದಾರೆ. ಬೈಕ್ ಓಡಿಸುವ ವೇಳೆ ಬಾಯಲ್ಲಿ ಸಿಗರೇಟು ಹಿಡಿದು ಜನರನ್ನು ಭಯಪಡಿಸುತ್ತಾ, ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯರು ಈ ಭಯಾನಕ ಹಾವಳಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸಾರ್ವಜನಿಕರು ಪೊಲೀಸರು ಈ ರೀತಿ ದುರುಡಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದ್ನೂ ಓದಿ : ಕೋಲಾರದಲ್ಲಿ ಸಿಲಿಂಡರ್ ಸ್ಪೋಟಗೊಂಡು 1 ಅಂತಸ್ತಿನ ಮನೆ ಕುಸಿತ.. 12 ವರ್ಷದ ಬಾಲಕಿ ಸಾವು, ನಾಲ್ವರಿಗೆ ಗಾಯ



















