ಬೆಂಗಳೂರು: ಅಂತರಾಷ್ಟ್ರೀಯ ಯುದ್ಧದ ಉದ್ರಿಕ್ತ ಪರಿಸ್ಥಿತಿಗಳ ನಡುವೆ ಚಿನ್ನ ಪ್ರಿಯರಿಗೆ ಸಂತೋಷದ ಸುದ್ದಿ ಸಿಕ್ಕಿದೆ. ಸತತ ಏರುತಲಿದ್ದ ಚಿನ್ನದ ಬೆಲೆ ಇದೀಗ ಕುಸಿದಿದ್ದು, 1 ಲಕ್ಷ ರೂಪಾಯಿಗೆ ಸನಿಹಕ್ಕೆ ಬರಲಿದೆ.
ವಿಶೇಷವಾಗಿ, ವಾರ್ ಎಫೆಕ್ಟ್ ಪರಿಣಾಮದಿಂದ ಗಗನಕ್ಕೇರಿದ ಚಿನ್ನದ ಬೆಲೆ ಇದೀಗ ಪಾತಾಳಕ್ಕೆ ಇಳಿದಿರುವುದು ಗಮನಾರ್ಹ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ, ಯುದ್ಧದ ಪರಿಣಾಮದಿಂದ 30 ಸಾವಿರ ರೂಪಾಯಿವರೆಗೆ ಏರಿದ್ದರೆ, ಈಗ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಅದೇ ರೀತಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಸುಮಾರು 25 ಸಾವಿರ ರೂಪಾಯಿಗೆ ಇಳಿಕೆಯಾಗಿದೆ. ಈ ಬೆಲೆ ಕುಸಿತವು ಚಿನ್ನ ಖರೀದಿಸಲು ಬಯಸುವವರಿಗೆ ಸಂತೋಷದಾಯಕವಾಗಿದೆ.
ಇಂದಿನ ಚಿನ್ನದ ದರ?
* 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ಇಂದು 2,700 ರೂ ಇಳಿಕೆ, 1 ಗ್ರಾಂ ಗೆ 270 ರೂ. ಇಳಿಕೆ
* 24 ಕ್ಯಾರೆಟ್ 10 ಗ್ರಾಂಗೆ 2,940 ರೂ. ಇಳಿಕೆ, 1 ಗ್ರಾಂಗೆ 294 ರೂ ಇಳಿಕೆ.
* 22 ಕ್ಯಾರೆಟ್ ಚಿನ್ನದ ದರ 1,28,650 ರೂ
* 24 ಕ್ಯಾರೆಟ್ ಚಿನ್ನದ ದರ 1,40,0350 ರೂ.ಗೆ ಬಂದಿದೆ.



















