ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ((GBA) ಅಧೀನದಲ್ಲಿರುವ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ–2026ರ ಸಂಬಂಧ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಮಾರ್ಚ್ 9, 2026ರಂದು ಪ್ರಕಟಿಸಲಾಗಿದೆ.
ಈ ಕರಡು ಮತದಾರರ ಪಟ್ಟಿಯ ಪ್ರತಿಗಳು ಸಂಬಂಧಿತ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ನೋಂದಣಾಧಿಕಾರಿಗಳು ಹಾಗೂ ವಾರ್ಡ್ ಕಚೇರಿಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತವೆ.
ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಮಾರ್ಚ್ 30, 2026ರವರೆಗೆ ವಿಸ್ತರಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯನ್ನು ಏಪ್ರಿಲ್ 6ರಿಂದ ಏಪ್ರಿಲ್ 18, 2026ರವರೆಗೆ ಮುಂದೂಡಲಾಗಿದೆ.
ಮತದಾರರು ತಮ್ಮ ಹೆಸರುಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ:
ಇದಲ್ಲದೆ, Search by Name ಅಥವಾ Search by EPIC ಆಯ್ಕೆಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ.
ಮತದಾರರು ತಮ್ಮ ಸಾಮಾನ್ಯ ನಿವಾಸ ಇರುವ ವಾರ್ಡ್‌ನಲ್ಲಿಯೇ ಹೆಸರು ನೋಂದಾಯಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಬೇರೆ ವಾರ್ಡ್‌ನಲ್ಲಿ ಹೆಸರು ನಮೂದಾಗಿದ್ದರೆ, ಸಂಬಂಧಿತ ನಗರ ಪಾಲಿಕೆ, ಮತದಾರರ ನೋಂದಣಾಧಿಕಾರಿ ಅಥವಾ ವಾರ್ಡ್ ಕಚೇರಿಯಲ್ಲಿ ದೂರು ಸಲ್ಲಿಸಬಹುದು ಎಂದು ಜಿಬಿಎ ಮುಖ್ಯ ಅಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹೆಬ್ಬಾಳ ಕ್ಷೇತ್ರದ 2 ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಜಿಬಿಎ ಚಿಂತನೆ



















