ಬೆಂಗಳೂರು: ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆಂಗೇರಿಯ ಬಿಡಿಎ ಅಪಾರ್ಟ್ಮೆಂಟ್ ಬಳಿಯಲ್ಲಿನ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ.
ಕೆಂಪಮ್ಮ (45) ಮೃತ ಮಹಿಳೆ. ಕಳೆದ ರಾತ್ರಿ ಕಿಡಿಗೇಡಿಗಳು ಮಹಿಳೆಯನ್ನು ಕೊಲೆ ಮಾಡಿ, ಕಸದ ರಾಶಿಯ ಬಳಿಯಲ್ಲಿ ಮೃತದೇಹವನ್ನು ಬಿಸಾಡಿದ್ದಾರೆ.
ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ರಸ್ತೆಯಲ್ಲಿ ಹೋಗುತಿದ್ದ ಸ್ಥಳೀಯರು 112 ಗೆ ಕರೆಮಾಡಿ ಮಾಹಿತಿ ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದೀಗಾ ಘಟನಾ ಸ್ಥಳದಲ್ಲಿ FSL ತಂಡದಿಂದ ಪರಿಶೀಲನೆ ನಡೆಯುತ್ತಿದ್ದು, ಮೃತ ಮಹಿಳೆ ಅಕ್ಕಪಕ್ಕ ಮದ್ಯದ ಬಾಟಲಿಗಳು ಪತ್ತೆಯಾಗದ್ದು, ಮದ್ಯದ ಬಾಟಲ್‌ನಲ್ಲಿ ಫಿಂಗರ್ ಪ್ರಿಂಟ್ ಬಗ್ಗೆ ಸೋಕೋ ಟೀಂ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಕ್ರೂರಿ ಗೆಳೆಯರು


















