ಬೆಂಗಳೂರು: ನಗರದ ಬಿಟಿಎಂ ಲೇಔಟ್‌ನಲ್ಲಿ ನಿನ್ನೆ ರಾತ್ರಿ ಯುವಕರ ಗುಂಪೊಂದು ಬಿಯರ್ ಬಾಟಲ್ ಹಿಡಿದು ರಸ್ತೆಯಲ್ಲಿ ಸಂಚರಿಸುವಾಗಲೇ ಹುಚ್ಚಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ವಾಹನ ಸಂಚಾರ ಹೆಚ್ಚು ಇರುವ ರಸ್ತೆಯಲ್ಲೇ ಯಾವುದೇ ಪೊಲೀಸರ ಭಯವಿಲ್ಲದೆ ಡೇಂಜರಸ್ ರೈಡಿಂಗ್ ನಡೆಸಿದ ಯುವಕರು, ಬೈಕ್ ಮೇಲೆ ಟ್ರಿಪಲ್ ರೈಡಿಂಗ್ ಮಾಡುತ್ತಾ ಬಿಯರ್ ಕುಡಿಯುತ್ತಿರುವುದು ಕಂಡುಬಂದಿದೆ. ಹೆಲ್ಮೆಟ್ ಧರಿಸದೇ, ಅಸಡ್ಡೆಯ ಕೈ ಸನ್ನೆಗಳನ್ನು ಮಾಡುತ್ತಾ ಅತೀವ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದ್ದಾರೆ.
ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಯುವಕರ ಮೋಜು-ಮಸ್ತಿಯಿಂದ ಆತಂಕಕ್ಕೆ ಒಳಗಾದರು. ಇಂತಹ ಅಜಾಗರೂಕ ವರ್ತನೆ ಕಾನೂನುಬಾಹಿರವಾಗಿದ್ದು, ಜೀವಕ್ಕೆ ಅಪಾಯಕಾರಿಯೂ ಆಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
KA 04 JS 8028 ಸಂಖ್ಯೆಯ ಟೂ ವೀಲರ್‌ನಲ್ಲಿ ಈ ಕೃತ್ಯ ನಡೆದಿದ್ದು, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಘಟನೆ ಯಾವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಯುವಕರ ಬೇಜವಾಬ್ದಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಐಷಾರಾಮಿ ಕುಡುಕನಿಂದ ಕಿರುಕುಳ : ಏರಿಯಾದಲ್ಲಿ ರೌಡಿಸಂ!



















