ಕೋಲಾರ : ಹೃದಯಾಘಾತಕ್ಕೊಳಗಾಗಿ ಪೊಲೀಸ್ ಮುಖ್ಯಪೇದೆ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಸೀಸಂದ್ರ ಗ್ರಾಮದಲ್ಲಿ ನಡೆದಿದೆ.
ಸೀಸಂದ್ರ ಗ್ರಾಮದ ವೆಂಕಟರಮಣಪ್ಪ (50) ಮೃತ ದುರ್ದೈವಿ. ವೆಂಕಟರಮಣಪ್ಪ ಕೆಜಿಎಫ್ ಜಿಲ್ಲಾ ಪೊಲೀಸ್‌ನ ಊರಿಗಾಂ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇತ್ತೀಚಿಗೆ ತೂಕ ಕಡಿಮೆ ಮಾಡುವ ಹಿನ್ನೆಲೆ ವೆಂಕಟರಮಣಪ್ಪ ಡಯಟ್ ಸೇರಿದಂತೆ ಔಷಧ ತೆಗೆದುಕೊಳ್ಳುತ್ತಿದ್ದರು. ಇಂದು ಮುಂಜಾನೆ ಮನೆಯಲ್ಲೇ ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಟ್ರ‍್ಯಾಕ್ಟರ್-ಟ್ರೇಲರ್ ಮಧ್ಯೆ ಸಿಲುಕಿ ಚಾಲಕ ಸಾವು!



















