ಗದಗ : ಈ ಹಿಂದೆಯೇ ಬಿಜೆಪಿ ಅವರು ರಾಜ್ಯ ಮತ್ತು ದೇಶಕ್ಕೆ ಏನು ಕೆಟ್ಟ ದಾರಿ ತೋರಿಸಬೇಕೋ ತೋರಿಸಿದ್ದಾರೆ. ಈಗ ಆಪರೇಷನ್ ಕಮಲ ಎನ್ನುವ ಹೊಸ ರಾಜಕೀಯ ಪ್ರಯೋಗ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಓಡಿಸ್ಸಾದಲ್ಲಿ ರಾಜಕೀಯ ಬಿಕ್ಕಟ್ಟು ವಿಚಾರವಾಗಿ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡ ದಿನೇಶ್ ಗುಂಡೂರಾವ್, ಅಡ್ಡ ದಾರಿಯಿಂದ ಸರ್ಕಾರ ಬಿಳಿಸೋದು, ಅಡ್ಡ ಮತದಾನ ಮಾಡಿಸುವುದು, ಆಮೀಷವೊಡ್ಡುವುದು ಯಾವುದೇ ಮಾರ್ಗದಿಂದಾರೂ ಅಧಿಕಾರ ಹಿಡಿಯೋದು ಬಿಜೆಪಿಯವರ ರಾಜಕೀಯ ತಂತ್ರವಾಗಿದೆ.ರಾಜ್ಯಸಭಾದಲ್ಲಿಯೂ ಅದೇ ಮಾರ್ಗ ಹಿಡಿದ್ದಾರೆ. ನಿನ್ನೆ ಬಿಡದಿಯಲ್ಲೂ ಅದೇ ನಡೆದಿದ್ದು, ನಮ್ಮ ಶಾಸಕರಿಗೆ ದುಡ್ಡು ಕೊಡುವ ಆಮೀಷವೊಡ್ಡಿದ್ದಾರೆ. ಈಗಾಗಲೇ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿಯ ಅನೈತಿಕವಾದ ಪದ್ಧತಿಗೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು, ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲ ವಿಚಾರವಾಗಿ ಮಾತನಾಡಿ, ಯಾವ ಗೊಂದಲ ಇಲ್ಲ. ಎಲ್ಲಿದೆ ಗೊಂದಲ ಇದೆ ಎಂದು ಪ್ರಶ್ನೆ ಮಾಡಿದ ಅವರು, ಸದ್ಯ ಸುಸೂತ್ರವಾಗಿ ಅಧಿವೇಶನ ನಡೆಯುತ್ತಿದೆ.ಯಾವ ಬದಲಾವಣೆಯೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ : “ಬುಮ್ರಾ ಒಬ್ಬ ರೋಬೋಟ್, ದೇಶದ ಆಸ್ತಿ” – ವಿಶ್ವವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಗುಣಗಾನ!



















