ಬಳ್ಳಾರಿ | ಚೀಟಿ ಹೆಸರಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಮೋಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶನನ್ನು ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕರು ಹೂಡಿಕೆ ಮಾಡಿದ್ದ ಹಣದೊಂದಿಗೆ ಚೀಟಿ ನಡೆಸುತ್ತಿದ್ದ ವೆಂಕಟೇಶ್, ಕಳೆದ ನಾಲ್ಕು ತಿಂಗಳ ಹಿಂದೆ
ಚೀಟಿ ಹೆಸರಲ್ಲಿ ಕೋಟ್ಯಾಂತರ ರೂಪಯಿ ವಂಚನೆ ಮಾಡಿ ಪರಾರಿಯಾಗಿದ್ದ. ಆ ಬಳಿಕ ಪೊಲೀಸರು ಆರೋಪಿಯನ್ನು ಹುಡುಕುವಲ್ಲಿ ವಿಳಂಬ ಮಾಡ್ತಿದ್ದಾರೆಂದು ದೂರಿದ ಸಂತ್ರಸ್ತರು, ಶಾಸಕ ಭರತ್ ರೆಡ್ಡಿಯೊಂದಿಗೆ ಕಳೆದ ಹದಿನೈದು ದಿನಗಳ ಹಿಂದೆ ಠಾಣೆಗೆ ಬಂದಿದ್ದರು.
ಇದೀಗ ಕೊನೆಗೂ ಆರೋಪಿ ವೆಂಕಟೇಶ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಬಂಧಿತ ಆರೋಪಿ ವೆಂಕಟೇಶ್ ಬಳ್ಳಾರಿ ಹವಂಬಾವಿ ಪ್ರದೇಶದ ನಿವಾಸಿಯಾಗಿದ್ದಾನೆ. ವೆಂಕಟೇಶ್ ಜೊತೆಗಿದ್ದ ಪಾರ್ಟನರ್ ಸಲೀಂ, ವೆಂಕಟೇಶ್‌ನ ಅಳಿಯ ಸಚಿನ್ ಮತ್ತು ವೆಂಕಟೇಶ ಪತ್ನಿ ಸರೋಜ ಇನ್ನು ನಾಪತ್ತೆಯಾಗಿದ್ದಾರೆ.
ಇವರ ಗ್ಯಾಂಗ್ ತರಕಾರಿ, ಹೂ, ಚಹಾ ಮಾರಾಟ ಮಾಡುವವರು, ಹಮಾಲಿ, ದಿನಗೂಲಿ ಕಾರ್ಮಿಕರು ಸೇರಿದಂತೆ ಮತ್ತಿತರ 700ಕ್ಕೂ ಹೆಚ್ಚಿನ ಜನರಿಂದ ಕಂತಿನ ಮೂಲಕ ಚೀಟಿ ಹಣ ಕಟ್ಟಿಸಿ ಕೊಂಡಿದ್ರು. ಸದ್ಯ ಚಿತ್ರದುರ್ಗದಲ್ಲಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮದುವೆ, ಶಿಕ್ಷಣ, ವಸತಿ ನಿವೇಶನ ಖರೀದಿ, ಆಭರಣ ಕೊಳ್ಳಲು ಸೇರಿದಂತೆ ವಿವಿದ ಕಾರಣಕ್ಕೆ ಚೀಟಿ ಕಟ್ಟಿರುವ ಜನರು ಗೋಳಾಡುತ್ತಿದ್ದಾರೆ.
ಇದನ್ನೂ ಓದಿ ; ಚಾ.ನಗರದಲ್ಲಿ ಟಾಟಾ ಏಸ್ ವಾಹನ ಪಲ್ಟಿ – 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ



















