ಬೀದರ್ | ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಕುದುರೆ ಜಾಡಿಸಿ ಒದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬೀದರ್‌ನ ಚಿದ್ರಿಯಿಂದ ಮೈಲೂರಿಗೆ ಹೋಗುವ ರಿಂಗ್ ರಸ್ತೆಯಲ್ಲಿ ನಡೆದಿದೆ.
ಮೈಲೂರಿನ ಜಮ್ಮಿ ಕಾಲನಿ ನಿವಾಸಿ ವೈಜನಾಥ (60) ಮೃತ ವ್ಯಕ್ತಿ. ಚಿದ್ರಿಯಲ್ಲಿ ಕೆಲಸ ಮುಗಿಸಿ ರಿಂಗ್ ರಸ್ತೆಯಲ್ಲಿ ಮೈಲೂರಿಗೆ ನಡೆದುಕೊಂಡು ವೈಜನಾಥ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕುದುರೆಯೊಂದು ವ್ಯಕ್ತಿಗೆ ಒದ್ದಿದೆ. ಕುದುರೆ ಒದ್ದ ಪರಿಣಾಮ ವೈಜನಾಥನ ತಲೆಗೆ ಗಂಭೀರ ಗಾಯವಾಗಿತ್ತು.
ಕೂಡಲೇ ವೈಜನಾಥ್‌ಗೆ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ವೈಜನಾಥ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಮನೆಯಿಂದ ಹೊರಹೋದ ಜೀವದ ಗೆಳೆಯರ ದುರಂತ ಅಂತ್ಯ!



















