ಬೆಂಗಳೂರು: ನಗರದ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ಗಳಲ್ಲಿ ಗ್ಯಾಸ್ ಕೊರತೆಯ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಸೌದೆ ಬಳಸಿ ಅಡುಗೆ ಮಾಡಲು ಮುಂದಾಗಿರುವ ಘಟನೆ ಬೆಂಗಳೂರಲ್ಲಿ ಕಂಡುಬಂದಿದೆ.
ಗ್ಯಾಸ್ ಲಭ್ಯವಾಗದ ಕಾರಣ ಈಗಾಗಲೇ ಬುಕಿಂಗ್ ಮಾಡಿಕೊಂಡಿರುವ ಅತಿಥಿಗಳಿಗೆ ಆಹಾರ ತಯಾರಿಸಲು ಹೋಟೆಲ್‌ಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದರ ಭಾಗವಾಗಿ ಕೆಲವು ಹೋಟೆಲ್‌ಗಳಲ್ಲಿ ಒಲೆ ಹಚ್ಚಿ ಸೌದೆ ಬಳಸಿ ಅಡುಗೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ನಗರದ ಪ್ರತಿಷ್ಠಿತ ಮೂರು ಸ್ಟಾರ್ ಹೋಟೆಲ್ ಒಂದರಲ್ಲಿ ಅಡುಗೆ ಸಿದ್ಧಪಡಿಸಲು ಹೋಟೆಲ್ ಸಿಬ್ಬಂದಿಯೇ ಸುತ್ತಮುತ್ತಲಿನ ಪ್ರದೇಶಗಳಿಂದ ಸೌದೆಗಳನ್ನು ಜೋಡಿಸಲು ಮುಂದಾಗಿರುವ ದೃಶ್ಯಗಳು ಕಂಡುಬಂದಿವೆ. ಸಿಬ್ಬಂದಿಗಾಗಿ ಹಾಗೂ ಈಗಾಗಲೇ ಬಂದಿರುವ ಅತಿಥಿಗಳಿಗೆ ಆಹಾರ ಸಿದ್ಧಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ನಗರದಲ್ಲಿನ ಹಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡುತ್ತಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ ; ಕೊಳ್ಳೇಗಾಲ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಬೆಂಕಿ ಅವಘಡ : ಕಂಪ್ಯೂಟರ್, ದಾಖಲೆಗಳು ಸುಟ್ಟು ಭಸ್ಮ



















