ದೊಡ್ಡಬಳ್ಳಾಪುರ : ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಕೇಬಲ್ಗಳು ಸುಟ್ಟು ಬೂದಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ನಿನ್ನೆ ಸಂಜೆ ಹೊತ್ತಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಡ್ವಾನ್ಸ್ ಟೆಕ್ನಾಲಜೀಸ್ ಯುನಿಟ್ 2 ಕಂಪನಿಯಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿವೆ.
ಇದು ಕೇಬಲ್ ತಯಾರಿಕಾ ಕಂಪನಿಯಾಗಿದ್ದು, ಮೊದಲಿಗೆ ಕಂಪನಿಯಲ್ಲಿರುವ ಮರದ ತುಂಡುಗಳಿಗೆ ಹೊತ್ತಿಕೊಂಡ ಬೆಂಕಿ ಇಡೀ ಕಂಪನಿಗೆ ಆವರಿಸಿದೆ. ನಂತರ ಕೇಬಲ್ಗಳಿಗೂ ವ್ಯಾಪಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : 25ಕ್ಕೂ ಅಧಿಕ ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ 2026ರ ಹುಂಡೈ ವರ್ನಾ.. ಬೆಲೆ ಎಷ್ಟು ಗೊತ್ತಾ?



















