ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದುವರಿದಿರುವ ಯುದ್ಧದ ಎಫೆಕ್ಟ್ ಇದೀಗ ಭಾರತದ ಮೇಲೂ ಕಾಣಿಸಿಕೊಳ್ಳಲು ಆರಂಭವಾಗಿದೆ. ಆಮದು-ರಫ್ತು ವ್ಯವಹಾರಗಳಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ವಾಣಿಜ್ಯ ಬಳಕೆಯ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಭಾರತಕ್ಕೆ ಅಗತ್ಯ ಪ್ರಮಾಣದಲ್ಲಿ ಇಂಧನ ಹಾಗೂ ಅನಿಲ ಆಮದು ಆಗದಿರುವುದರಿಂದ ವಾಣಿಜ್ಯ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ ಹೋಟೆಲ್‌ಗಳು ಉದ್ಯಮಕ್ಕೂ ದೊಡ್ಡ ಹೊಡೆತ ಬೀಳುತ್ತಿದೆ.
ಕಳೆದ ಎರಡು-ಮೂರು ದಿನಗಳಿಂದ ಹೋಟೆಲ್‌ಗಳಿಗೆ ಸರಿಯಾದ ಪ್ರಮಾಣದಲ್ಲಿ ಗ್ಯಾಸ್ ಪೂರೈಕೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಹೋಟೆಲ್‌ಗಳು ಟೀ-ಕಾಫಿ ಸೇರಿದಂತೆ ಆಹಾರ ತಯಾರಿಕೆಗೆ ಗ್ಯಾಸ್ ಅವಶ್ಯಕವಾಗಿರುವ ಕಾರಣ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ.
ಈಗಾಗಲೇ ಅನೇಕ ಹೋಟೆಲ್‌ಗಳಲ್ಲಿ ಇರುವ ಗ್ಯಾಸ್ ಸ್ಟಾಕ್ ಬಹುತೇಕ ಖಾಲಿಯಾಗಿರುವ ಸ್ಥಿತಿ ಉಂಟಾಗಿದೆ. ಇಂದು ಗ್ಯಾಸ್ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ಬಂದ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಗ್ಯಾಸ್ ಪೂರೈಕೆಯ ಸಮಸ್ಯೆ ಮುಂದುವರಿದರೆ ಆಹಾರ ಸೇವಾ ಕ್ಷೇತ್ರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಯುದ್ಧದ ಮಧ್ಯೆಯೇ LPG ಸಿಲಿಂಡರ್ ಬುಕ್ಕಿಂಗ್ ಕುರಿತು ಕೇಂದ್ರ ಮಹತ್ವದ ಆದೇಶ : ಕೊರತೆ ನಿಜವೇ?



















