ಬೀದರ್ : ಮೌಲ್ವಿಗಳ ಮೇಲೆ ಅನ್ಯಕೋಮಿನ ಜನ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಠಾಣೆ ಮುಂದೆ ಹೈಡ್ರಾಮಾ ಮಾಡಿ ಎಫ್‌ಐಆರ್ ದಾಖಲಾದ 49 ಜನರ ಪೈಕಿ 20 ಜನರನ್ನ ಬೀದರ್ ಪೊಲೀಸರು ಬಂಧಿಸಿದ್ದಾರೆ.
ಘಟನೆಯಾದಾಗ ಬಸವಕಲ್ಯಾಣ ನಗರ ಠಾಣೆ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು ಹಾನಿಯ ದೃಶ್ಯಗಳು ಘಟನೆಯ ಭೀಕರತೆ ಬಿಚ್ಚಿಟ್ಟಿವೆ. ಠಾಣೆ ಮುಂಭಾಗದಲ್ಲಿ ಕಲ್ಲು ತೂರಾಟದಿಂದಾದ ಡಿಎಆರ್ ವ್ಯಾನ್ ಸೇರಿದಂತೆ ಹಾನಿಯಾಗಿದ್ದು, ಉದ್ರಿಕ್ತ ಗುಂಪಿನಿಂದ ಎಸೆದ ಕಲ್ಲುಗಳಿಂದ ಪೊಲೀಸ್ ವಾಹನಕ್ಕೆ ಹಾನಿಯಾಗಿದೆ.
ಇಲಾಖೆಯ ಆಸ್ತಿಪಾಸ್ತಿ ಹಾನಿ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ 49 ಆರೋಪಿಗಳ ಪೈಕಿ 20 ಆರೋಪಿಗಳನ್ನು ಬಂಧಿಸಿ ಪೊಲೀಸರಿಂದ ತೀವ್ರ ವಿಚಾರಣೆ ಮಾಡಲಾಗುತ್ತಿದೆ.
ಘಟನೆಯಾದ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಬಸವಕಲ್ಯಾಣ ಪೊಲೀಸರು ಆರೋಪಿಗಳ ಪತ್ತೆ ಹಚ್ಚುತಿದ್ದು ಪ್ರಕರಣ ಸಂಬಂಧ ಬಸವಕಲ್ಯಾಣ ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಅತ್ತ ಮೌಲ್ವಿಗಳ ಮೇಲೆ ಹಲ್ಲೆ ಮಾಡಿದ 5 ಜನ ಅನ್ಯಕೋಮಿನ ಜನರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾ ಕಡಲ ತೀರದಲ್ಲಿ ಇರಾನ್ ಯುದ್ಧನೌಕೆ ಮುಳುಗಿಸಿದ ಅಮೆರಿಕ | ಭಾರತಕ್ಕೂ ಆತಂಕ



















