ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ನಂಜನಗೂಡು ಕ್ಷೇತ್ರ ಕೂಡ ಒಂದು. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ನಂಜುಂಡೇಶ್ವರ ಅಂದ್ರೆ ಅದೆಷ್ಟೋ ಜನರಿಗೆ ಆರಾಧ್ಯ ದೈವ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಂತೆ ಈ ದೇಗುಲದಲ್ಲೂ ಮಾಂಸಾಹಾರ ತಯಾರಿ, ಮಾಂಸಹಾರ ಸೇವನೆ ನಿಷಿದ್ಧ. ಆದರೆ ಇದೆಲ್ಲ ಗೊತ್ತಿದ್ದೂ ಕಿಡಿಗೇಡಿಯೊಬ್ಬ ನಂಜುಂಡೇಶ್ವರನ ಸನ್ನಿಧಾನದಲ್ಲಿ ಮಾಂಸಾಹಾರ ಸೇವನೆ ಮಾಡಿರುವ ಆರೋಪ ಕೇಳಿಬಂದಿದೆ.
ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯದ ಅನ್ನದಾಸೋಹ ಭವನದ ಮುಖ್ಯದ್ವಾರದಲ್ಲಿ ಈ ಘಟನೆ ನಡೆದಿದ್ದು, ಹೂವಿನ ವ್ಯಾಪಾರಿ ಪ್ರದೀಪ್ ಎಂಬಾತನ ಮೇಲೆ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮಾಂಸಾಹಾರ ಸೇವನೆ ಆರೋಪ ಕೇಳಿಬಂದಿದೆ.
ಪ್ರದೀಪ್ ದಾಸೋಹ ಭವನದ ದ್ವಾರದಲ್ಲಿ ಮಾಂಸಾಹಾರ ಸೇವಿಸುತ್ತಾ ಇರುವ ದೃಶ್ಯ ಸೆರೆಯಾಗಿದೆ. ಮಾಂಸಾಹಾರ ಸೇವಿಸುತ್ತಿದ್ದ ಪ್ರದೀಪ್‌ನನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಮಾಂಸಾಹಾರ ಸೇವಿಸಿ ಸಿಕ್ಕಿ ಬಿದ್ದ ಪ್ರದೀಪ್‌ಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಐಸಿಸಿ ಏಕದಿನ ಶ್ರೇಯಾಂಕ | ವಿಶ್ವದ ‘ನಂಬರ್ 1’ ಬ್ಯಾಟರ್ ಆಗಿ ಸ್ಮೃತಿ ಮಂದಾನ ಅಬ್ಬರ!



















