ನ್ಯೂಯಾರ್ಕ್ : ದುಷ್ಕರ್ಮಿಯೊಬ್ಬ ಅಮಾಯಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಒಬ್ಬ ವಿದ್ಯಾರ್ಥಿನಿ ಭಾರತೀಯ ಮೂಲದವರಾಗಿದ್ದಾರೆ.
ಇರಾನ್ ಧ್ವಜದ ಚಿಹ್ನೆ ಧರಿಸಿದ ವ್ಯಕ್ತಿ, ಇಲ್ಲಿನ ಜನಪ್ರಿಯ ಸ್ಥಳದ ಹೊರಭಾಗದಲ್ಲಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಸವಿತಾ ಶಾನ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ 14 ಗಾಯಗೊಂಡಿದ್ದಾರೆ.
ದಾಳಿಕೋರನನ್ನು ಸೆನೆಗಲ್‌ನ ವಲಸೆಗಾರ ನ್ಡಿಯಾಗಾ ಡಯಾಗ್ನೆ (53) ಎಂದು ಗುರುತಿಸಲಾಗಿದೆ. ಈತನಿಗೆ ಭಯೋತ್ಪಾದಕ ಚಟುವಟಿಕೆಗಳ ಸಂಬಂಧವಿರುವ ಮಾಹಿತಿ ಇದೆ. ತನಿಖೆ ನಡೆಸುತ್ತಿದ್ದೇವೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ)ನ ಆ್ಯಕ್ಟಿಂಗ್ ಸ್ಪೆಷಲ್ ಏಜೆಂಟ್ ಅಲೆಕ್ಸ್ ಡೋರನ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವನ್ನು ಟೆಕ್ಸಾಸ್ ವಿವಿಯ ಅಧ್ಯಕ್ಷ ಜಿಮ್ ಡೇವಿಸ್ ದೃಢಪಡಿಸಿದ್ದು, ಇಮೇಲ್ ಮೂಲಕ ತಮ್ಮ ಕ್ಯಾಂಪಸ್ ಸಮುದಾಯಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪೋಕ್ಸೋ ಪ್ರಕರಣ | ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿ ವಿಚಾರಣೆ ಮೂಂದೂಡಿಕೆ



















