ಬೆಳಗಾವಿ : ದೇವಸ್ಥಾನದ ಜಾಗದಲ್ಲಿ ಮೇವು ಒಟ್ಟಿದ್ದಕ್ಕೆ ಮಹಿಳೆಯ ಮೇಲೆ ಪುಡಿ ರೌಡಿಗಳು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗನಾಥ ದೇವಸ್ಥಾನದ ಆವರಣದಲ್ಲಿ ರೈತರು ಮೇವು ಒಟ್ಟಿಕೊಂಡಿದ್ದರು. ಮೇವು ಅಲ್ಲಿಂದ ತೆಗೆಯಿರಿ, ಇಲ್ಲವಾದರೆ ಅದಕ್ಕೆ ಬೆಂಕಿ ಇಡ್ತಿವಿ ಎಂದು ಗ್ರಾಮದ ಕೆಲ ಪುಡಿ ರೌಡಿಗಳು ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಈ ವೇಳೆ ಗ್ರಾಮದ ರೈತ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೂಡ ಕೇಳಿಬಂದಿದೆ.
ಈ ಹಿನ್ನೆಲೆ ಹರಿದ ಸ್ವೇಟರ್ ಹಾಕಿಕೊಂಡೆ ಪೊಲೀಸರನ್ನು ಭೇಟಿಯಾಗಲು ಮಹಿಳೆ ಬಂದಿದ್ದರೂ ಕಾಕತಿ ಪೊಲೀಸರು ಕ್ಯಾರೆ ಎನ್ನದ ಹಿನ್ನೆಲೆ ನ್ಯಾಯಕ್ಕಾಗಿ ರೈತರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ಶಿವಾಜಿ ಬೋಗಾನ್, ಶಿವಾಜಿ ಪಾಟೀಲ್, ಜಯವಂತ ಸಾವಂತ್, ನವನಾಥ್ ಗಾವಡೆ, ಸುನೀಲ್ ಗಾವಡೆ ಎಂಬುವವರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.
ಇದನ್ನೂ ಓದಿ : ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡದೇ ಸತಾಯಿಸಿದ್ದ ಶಿಕ್ಷಕಿ ಸಸ್ಪೆಂಡ್!



















