ಚಿತ್ರದುರ್ಗ: ಪ್ರಿಯತಮೆಯ ಮೋಸದ ಬಲೆಗೆ ಸಿಕ್ಕಿ, ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಭರಮಪುರದಲ್ಲಿ ನಡೆದಿದೆ.
ಹರ್ಷ ಆತ್ಮಹತ್ಯೆಗೆ ಶರಣಾದ ಯುವಕ. ಪಶು ವೈದ್ಯಕೀಯ ಕೇಂದ್ರದಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಹರ್ಷ, ಸರ್ವೆ ಇಲಾಖೆಯ ಮಮತ ಎಂಬ ಯುವತಿಯನ್ನ ಪ್ರೀತಿ ಮಾಡಿದ್ದ. ಹಲವು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕೆಲ ತಿಂಗಳುಗಳಿಂದ ಮದುವೆಗೆ ನಿರಾಕರಣೆ ಮಾಡಿದ್ದ ಮಮತಾ. ಹರ್ಷನ ಪ್ರೀತಿಗೆ ಮೋಸ ಮಾಡಿ ಬೇರೋಬ್ಬರ ಜೊತೆ ಸುತ್ತಾಟ ಮಾಡುತ್ತಿದ್ದಳು ಎನ್ನಲಾಗುತ್ತಿದೆ.
ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮೃತ ಯುವಕ ಹರ್ಷ, ಪ್ರೀಯತಮೆ ಮಮತ ನಂಬಿಸಿ ಮೋಸ ಮಾಡಿದ್ದಾಳೆ ಹಾಗೂ ಆಕೆಯ ಪ್ರೀಯಕರ ಸಿದ್ದಪ್ಪ ಕೂಡಾ ಬೆದರಿಕೆ ಹಾಕುತ್ತಿದ್ದಾನೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಹರ್ಷ ತಂಗಿ ಲತಾ, ತಂದೆ ತಾಯಿಯನ್ನ ಕಳೆದುಕೊಂಡಿದ್ದ ನನಗೆ ಅಣ್ಣನೆ ಆಧಾರ ಸ್ಥಂಭವಾಗಿದ್ದ ಇದೀಗಾ ಅಣ್ಣ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಅಣ್ಣನ ಸಾವಿಗೆ ನ್ಯಾಯ ಒದಗಿಸಿಕೊಂಡಿ ಎಂದು ಮನವಿ ಮಾಡಿದ್ದಾರೆ. ತನ್ನ ಅಣ್ಣನಿಗೆ ವಂಚಿಸಿದ್ದ ಮಮತ ಹಾಗೂ ಸಿದ್ದಪ್ಪ ವಿರುದ್ದ ದೂರು ದಾಖಲಿಸಿದ್ದು,. ಮಮತಾ, ಸಿದ್ದಪ್ಪನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಇದನ್ನೂ ಓದಿ : ಅಮೃತಹಳ್ಳಿ ಪ್ರಕರಣದ ಕಹಿ ಸತ್ಯ ಬಯಲಿಗೆ…!?



















