ಬೆಂಗಳೂರು: ನಗರದ ಗಿರೀಶ್ ಅವರು ದುಬೈನಲ್ಲಿ ವಿಮಾನ ರದ್ದಾದ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ತಂಗಿದ್ದಾರೆ. ಬೆಂಗಳೂರಿನ ಐಡಿಇಎಂಐಎ (IDEMIA) ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿರುವ ಗಿರೀಶ್, ಫೆಬ್ರುವರಿ 28ರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದರು.
ಬೆಳಿಗ್ಗೆ 7.30ಕ್ಕೆ ದುಬೈ ತಲುಪಿದ ಅವರು, ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಪ್ಯಾರಿಸ್‌ಗೆ ತೆರಳಬೇಕಾಗಿತ್ತು. ಆದರೆ ಸೆಕ್ಯುರಿಟಿ ಕ್ಲಿಯರೆನ್ಸ್ ಸಮಸ್ಯೆಯಿಂದಾಗಿ ವಿಮಾನ ಪ್ರಯಾಣ ವಿಳಂಬಗೊಂಡಿದ್ದು, ನಂತರ ಸಂಜೆ 5 ಗಂಟೆಗೆ ಎಲ್ಲಾ ವಿಮಾನಗಳು ರದ್ದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಅವರು ಅಬುಧಾಬಿಯ ಯಾಸ್ ಪ್ಲಾಜಾ ಬೇ ಹೋಟೆಲ್‌ನಲ್ಲಿವಾಸ್ತವ್ಯ ಹೂಡಿದ್ದಾರೆ. ಈ ಕುರಿತು ಸೆಲ್ಪಿ ವಿಡಿಯೊ ಮೂಲಕ ಮಾಹಿತಿ ನೀಡಿದ ಗಿರೀಶ್, ಇಲ್ಲಿ ಯಾವುದೇ ತೊಂದರೆ ಇಲ್ಲ, ಸುರಕ್ಷಿತವಾಗಿದ್ದೇವೆ. ಹೋಟೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ಯಾರಿಸ್ ಪ್ರವಾಸವನ್ನು ರದ್ದುಗೊಳಿಸಿ, ಸಾಧ್ಯವಾದಷ್ಟು ಬೇಗ ಭಾರತಕ್ಕೆ ಮರಳುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ವಿಮಾನ ಕಾರ್ಯಾಚರಣೆ ಯಾವಾಗ ಪುನರಾರಂಭವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಇರಾನ್ ನಾಯಕ ಖಮೇನಿ ಮಾತ್ರವಲ್ಲ, ಪುತ್ರಿ, ಅಳಿಯ ಹಾಗೂ ಮೊಮ್ಮಗಳೂ ಬಲಿ



















