ಬೆಂಗಳೂರು | ರಾಜ್ಯದಲ್ಲಿ ಇತ್ತೀಚೆಗೆ ಗೃಹಲಕ್ಷ್ಮೀ ಯೋಜನೆಯದ್ದೇ ದೊಡ್ಡ ಸದ್ದು ಎನ್ನುವಂತಾಗಿದೆ. ಈಗ ಈ ಯೋಜನೆ ಮತ್ತೊಂದು ವಿವಾದಕ್ಕೆ ತೆರೆದುಕೊಂಡಿದೆ.
ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದ್ದು, ಈಗ ಸತ್ತವರ ಖಾತೆಗೂ ಹಣ ಜಮೆಯಾಗಿದ್ದು, ಆ ಕುಟುಂಬಸ್ಥರು ಪಡೆಯುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ತಲಾಶ್ ನಡೆಸಿರುವ ಅಧಿಕಾರಿಗಳಿಗೆ 69 ಸಾವಿರಕ್ಕೂ ಅಧಿಕ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂದರೆ ಬರೋಬ್ಬರಿ 79 ಕೋಟಿ ರೂ. ಹಣ ವರ್ಗಾವಣೆಯಾಗಿದೆ.
ಇದು ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊಡೆತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ತಪ್ಪು ಜಮೆಯ ಅಕೌಂಟ್ ಮೇಲೆ ಕಣ್ಣಿಟ್ಟಿರುವ ಸರ್ಕಾರ, ಮರಳಿ ಹಣ ಪಡೆಯಲು ಮುಂದಾಗಿದೆ. ಮೃತರ ಖಾತೆಯಿಂದ ಮರಳಿ ಹಣ ಪಡೆಯಲು ಮುಂದಾಗಲಾಗಿದೆ. ಹೀಗಾಗಿ ಹಲವರಿಗೆ ದೊಡ್ಡ ಶಾಕ್ ಎದುರಾಗಿದೆ.
ಇದನ್ನೂ ಓದಿ : ಮನೆಯಲ್ಲೇ ಕುಳಿತು ಪ್ಯಾನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಗೈಡೆನ್ಸ್



















