ಕೋಲಾರ | ಜಿಲ್ಲೆಯ ಮಾಲೂರು ನಗರದಲ್ಲಿ ಕಳ್ಳನೊಬ್ಬ ಮನೆ ಕಾಂಪೌಂಡ್ ಏರಿ ಕಾರ್ ವಾಷಿಂಗ್ ಯಂತ್ರ ಕದ್ದೊಯ್ದ ಘಟನೆ ನಡೆದಿದೆ.
ಮಾಲೂರು ನಗರದ ರವಿ ಕುಮಾರ್ ಎಂಬುವರ ನಿವಾಸದಲ್ಲಿ ಈ ಕಳವು ನಡೆದಿದೆ.
ಸೈಕಲ್‌ನಲ್ಲಿ ಬಂದ ಕಳ್ಳ, ಮನೆ ಕಾಂಪೌಂಡ್ ಏರಿ ಒಳ ನುಗ್ಗಿ ಕಾರ್ ವಾಷಿಂಗ್ ಯಂತ್ರವನ್ನು ಸಲೀಸಾಗಿ ಕದ್ದೊಯ್ದಿದ್ದಾನೆ. ಕಳ್ಳನ ಕೈಚಳಕ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಮನೆ ಮಾಲೀಕ ರವಿ ಕುಮಾರ್ ಅವರು ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ
ಇದನ್ನೂ ಓದಿ : ಎಷ್ಟೇ ಕಷ್ಟ ಆದ್ರೂ ಗ್ಯಾರಂಟಿಗಳನ್ನು ನಿಲ್ಲಿಸಲ್ಲ | ಡಿಕೆಶಿ



















