ಯಾದಗಿರಿ : ಸ್ವಯಂಘೋಷಿತ ದೇವಮಾನವ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಅರೆಸ್ಟ್ ಆಗುವ ಭೀತಿಯಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಿಂದಲೇ ಖ್ಯಾತಿ ಗಳಿಸಿದ್ದ ಮುತ್ಯಾಗೆ ಇದೀಗ ಸೋಷಿಯಲ್ ಮೀಡಿಯಾನೇ ಮುಳುವಾಗಿದೆ. ಬಾಲಕಿ ಜೊತೆ ಅನುಚಿತ ವರ್ತಿಸಿರೋ ವಿಡಿಯೋ ವೈರಲ್ ಆಗ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ್ದು, ನನ್ನ ಶ್ರೀಮಠದ ಭಕ್ತಾದಿಗಳೇ ಯಾವುದೇ ಆತಂಕ ಪಡಬೇಡಿ, ನಾನು ಇಲ್ಲೇ ಲೋಕಲ್ ಅಲ್ಲೇ ಇದ್ದೀನಿ, ಮಠದಲ್ಲಿ ಸಾಮೂಹಿಕ ಮದುವೆ ಇದ್ದ ಕಾರಣ ಕಾರ್ಡ್ ಕೊಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಇದೇ ವಿಡಿಯೋದಲ್ಲಿ ಪ್ರಕರಣ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ ಮುತ್ಯಾ, ಪೊಲೀಸ್ ಸಿಬ್ಬಂದಿ ಕರೆ ನೀಡಿದ್ದಾರೆಂಬುದು ಕೇಳಿದ್ದೇನೆ. ಖಂಡಿತ ಪೊಲೀಸ್ ಅಧಿಕಾರಿಗಳು ನಾನು ಯಾವಾಗ ಬಾ ಅಂತಾರೆ ಆಗ ನಾನು ಹೋಗಲು ಸಿದ್ಧನಿದ್ದೇನೆ. ಈ ವಿಷಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ನೀವು ಆತಂಕಪಡಬೇಡಿ ಎಂದು ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ರಿಲೀಸ್ ಮಾಡಿದ್ದಾರೆ.
ಹಿನ್ನೆಲೆ |
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ತುಣುಕೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ದೃಶ್ಯಾವಳಿಗಳಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿವೆ. ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ಹಾಗೂ ಚರ್ಚೆ ವ್ಯಕ್ತವಾಗುತ್ತಿದ್ದಂತೆ, ಪ್ರಕರಣಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಂಟ್ರಿ ಕೊಟ್ಟಿತ್ತು. ಬಳಿಕ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಅಮ್ಮನಿಗೆ “ಐ ಲವ್ ಯೂ” ಎಂದು ಸಂದೇಶ ಕಳುಹಿಸಿ ಪ್ರಾಣ ಬಿಟ್ಟ ಯೂಟ್ಯೂಬರ್



















