ಕಲಬುರಗಿ: ಮಕ್ಕಳ ಕಳ್ಳಿ ಎಂದು ತಿಳಿದು ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ತಾವರಗೇರಾ ಗ್ರಾಮದ ನಿವಾಸಿ ಸೀತಮ್ಮ ಎಂಬುವವರನ್ನು ಗ್ರಾಮದಲ್ಲಿ ಓಡಾಡುವ ಸಂದರ್ಭದಲ್ಲಿ ಹಿಡಿದು ಗ್ರಾಮಸ್ಥರ ಹಲ್ಲೆ ಮಾಡಿದ್ದಾರೆ.
ಬೇರೆ ಬೇರೆ ಕಡೆಗಳಲ್ಲಿ ದೇವರ ಹೆಸರಲ್ಲಿ ಭಿಕ್ಷೆ ಬೇಡಿ ಜೀವನವ ಮಾಡ್ತಿದ್ದ ಸೀತಮ್ಮ ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದಾಳೆ ಎಂದು ತಿಳಿದ ಗ್ರಾಮಸ್ಥರು ಥಳಿಸಿ, ನಂತರ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರಿಗೆ, ಸೀತಮ್ಮಊರೂರು ತಿರುಗಿ ಮಕ್ಕಳು, ವಯಸ್ಕರಿಗೆ ಆಶೀರ್ವಾದ ಮಾಡಿ, ಭಂಡಾರ ಹಾಕುತಿದ್ದಳು ಎನ್ನಲಾಗಿದೆ. ಗ್ರಾಮಸ್ಥರು ತಪ್ಪು ಗ್ರಹಿಕೆ ಮಾಡಿಕೊಂಡು ಮಹಿಳೆ ಮಾಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಸಿಂಧನೂರು | ಕೂದಲು ಜಾಸ್ತಿ ಬಿಟ್ಟಿದ್ದಾನೆ ಎಂದು ಎರ್ರಾಬಿರ್ರಿಯಾಗಿ ಕತ್ತರಿಸಿದ ಶಿಕ್ಷಕರು : ಪೋಷಕರ ಆಕ್ರೋಶ



















