ತುಮಕೂರು: ಸಾಲ ಬಾಧೆಯಿಂದ 400 ಕೆವಿ ಹೈಟೆನ್ಷನ್ ಟವರ್ ಮೇಲೇರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿ.ಕೆ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೋಪಾಲ 120 ಅಡಿ ಎತ್ತರಕ್ಕೆ ಹತ್ತಿ 400 ಕೆವಿ ಲೈನ್ ಪಕ್ಕದಲ್ಲೇ ಕುಳಿತ ವ್ಯಕ್ತಿ. ಸುಮಾರು10 ಲಕ್ಷ ಸಾಲ ಮಾಡಿದ್ದೇನೆಂದು ಪೊಲೀಸರಿಗೆ ತಿಳಿಸಿದ್ದಾನೆ. ತಮ್ಮ ಪ್ರಾಣ ಪಣಕ್ಕಿಟ್ಟು ಪಾವಗಡ ತಾಲೂಕು ಅಗ್ನಿಶಾಮಕ ಸಿಬ್ಬಂದಿಗಳು ಆತನನ್ನು ರಕ್ಷಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗಳಾದ ವೆಂಕಟೇಶ ನಾಡಗೌಡ, ನಾಗೇಶ ಎಂ.ಎನ್, ಶೇಕ್‌ಮನ್ಸೂರ್ ಅಹ್ಮದ್, ನಂದನ್ ಎಸ್.ಎಸ್., ಹರೀಶ್ ಗೋಪಾಲನ ಬಳಿ ಸಮೀಪ ಹೋಗಿ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಜೀತ ಪದ್ಧತಿ ಪ್ರಕರಣ ಪತ್ತೆ | ಹಾಸನದಲ್ಲಿ 18ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣೆ



















