ತುಮಕೂರು : ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಜಿಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಪತ್ರ ಬರೆದಿದ್ದಾರೆ.
ಪರೀಕ್ಷೆಗೆ ಸಿದ್ಧರಾಗಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ಧೈರ್ಯದ ಮಾತು ಹೇಳಿದ ಸಚಿವರು, ಅಂಬೇಡ್ಕರ್ ಅವರ ಉಕ್ತಿಗಳನ್ನು ಸ್ಫೂರ್ತಿಯಾಗಿದೆ ಎಂದು ಶಿಫಾರಸು ಮಾಡಿದ್ದಾರೆ. ಅವರು ಮಕ್ಕಳಿಗೆ ಅಂಕಗಳ ಒತ್ತಡ ಹಾಕಬಾರದು, ಅವರ ಪ್ರಯತ್ನಕ್ಕೆ ಪೋಷಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಮಾನತೆ ಮತ್ತು ಸ್ವಾಭಿಮಾನಕ್ಕಾಗಿ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಹೇಳಿದರು. ಸೋಲು ಅಂತ್ಯವಲ್ಲ, ಯಶಸ್ಸು ಅಂತಿಮವಲ್ಲ, ವಿಫಲತೆ ಅಂತ್ಯವಲ್ಲ ಧೈರ್ಯವೇ ನಿಜವಾದ ವಿಜಯ ಎಂಬ ಸಂದೇಶವನ್ನೂ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಈ ಮೂಲಕ ತ್ರಿವಿಧ ದಾಸೋಹಗಳ ನಾಡಿನ ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿರಲಿ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಶ್ರದ್ಧೆ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ : “ನಾನಿಲ್ಲದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು” | ಭಾರತ-ಪಾಕ್ ಸಂಘರ್ಷ ತಡೆದ ಬಗ್ಗೆ ಮತ್ತೆ ಟ್ರಂಪ್ ಹೇಳಿಕೆ



















