ಮಂಗಳೂರು: ಲೂಡೋ ಬೋರ್ಡ್‍ನ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಉಳ್ಳಾಲದ ಕೊಲ್ಯ ಗ್ರಾಮದಲ್ಲಿ ನಡೆದಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ, ರಾಜೇಶ್ವರಿ ದಂಪತಿಯ ಪುತ್ರಿ ತನುಷ್ಕ (8) ಮೃತ ಬಾಲಕಿ. ಸಹೋದರ, ಸಹೋದರಿ ಜೊತೆ ಲೂಡೋ ಆಟ ಆಡುತ್ತಿದ್ದಾಗ ಶಂಕು ಆಕಾರದ ಲೂಡೋ ಕಾಯಿನ್‍ನ್ನು ನುಂಗಿದ್ದಾಳೆ.
ಇದರಿಂದ ಏಕಾಏಕಿ ಉಸಿರುಗಟ್ಟಿ, ಬಾಲಕಿ ಗಂಭೀರ ಸ್ಥಿತಿ ತಲುಪಿದ್ದು, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕುರಿ ಕಳ್ಳತನಕ್ಕೆ ತೆರಳಿದ ಖತರ್ನಾಕ್ ಕಳ್ಳರು ಲಾಕ್..!



















