ಗದಗ: ಸರ್ಕಾರಿ ಕಾಮಗಾರಿಯೊಂದರ ಸಂಬಂಧ ಲಂಚ ಸ್ವೀಕರಿಸುವಾಗ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣ ಬೆನ್ನಲ್ಲೇ ಶಾಸಕ ಮತ್ತು ಗುತ್ತಿಗೆದಾರನ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಕಮಿಷನ್‌ಗಾಗಿ ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ ಎನ್ನಲಾದ 48 ಸೆಕೆಂಡ್‌ನ ಆಡಿಯೋವೊಂದು ಸ್ಫೋಟಗೊಂಡಿದೆ.
ಸೊಂಟ ಮುರಿಸ್ತೀನಿ.. ಪ್ರೀತಿ ವಿಶ್ವಾಸಕ್ಕೆ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ನಮ್ಮ ತಾಲೂಕಿನಲ್ಲಿ ಮಾಡಿದ್ರೆ ಸೊಂಟ ಮುರಿಸ್ತೀನಿ ಅಂತ ಗುತ್ತಿಗೆದಾರನ ವಿರುದ್ಧ ಲಮಾಣಿ ಗರಂ ಆಗಿದ್ದಾರೆ. ಈ ವೇಳೆ, ಇದೊಂದು ಸಾರಿ ತಪ್ಪಾಗಿದೆ ಅಂತ ಗುತ್ತಿಗೆದಾರ ಈ ಆಡಿಯೋದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ದೇವರ ಹುಂಡಿಯಲ್ಲಿ ಪತ್ತೆಯಾದ ವಿಚಿತ್ರ ಹರಕೆ ಚೀಟಿ | ಅತ್ತೆಯ ಸಾವಿಗೆ ಪ್ರಾರ್ಥನೆ



















