ಬೆಂಗಳೂರು : ವಿಜಯೇಂದ್ರ ಅವರು ಸ್ನೇಹಮಹಿ ಕೃಷ್ಣ ಪರ ನಿಲ್ತಾರೆ ಎಂದರೆ ನಿಲ್ಲಹುದು, ಕಾನೂನು ಉಲ್ಲಂಘನೆ ಮಾಡಿರೋರ ವಿರುದ್ಧ ಕ್ರಮ ತಗೊಂಡಿದ್ದಾರೆ. ಅದನ್ನು ಪ್ರಶ್ನೆ ಮಾಡಿದ್ರೆ ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರೇ ಅನುಭವಿಸಬೇಕಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸ್ನೇಹಮಹಿ ಕೃಷ್ಣ ಬಂಧಿಸಿ ಸರ್ಕಾರ ಸೇಡು ತೀರಿಸಿಕೊಳ್ತಿದೆ ಎಂಬ ವಿಜಯೇಂದ್ರ ಆರೋಪ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ವಿಜಯೇಂದ್ರ ಅವರೇ ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂತಹವರ ವಿರುದ್ಧ ಮಾತಾಡಿದ್ದಾರೆ. ಅದೇನು ಇರಲಿ, ಕಾನೂನು ಉಲ್ಲಂಘನೆ ಮಾಡಿರೋರ ವಿರುದ್ಧ ಕ್ರಮ ತಗೊಂಡಿದ್ದಾರೆ. ಏನು ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಗೃಹ ಸಚಿವರನ್ನೇ ಕೇಳಿ, ಅದು ನನ್ನ ಇಲಾಖೆ ಅಲ್ಲ ಎಂದು ವಿಜಯೇಂದ್ರಗೆ ತಿರುಗೇಟು ನೀಡಿದ್ದಾರೆ.
ಇನ್ನು, ಬಾಗಲಕೋಟೆ, ಕಲಬುರಗಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಕೈಗೆ ತಗೊಂಡು ಗಲಾಟೆ ಮಾಡೋರು ಎಲ್ಲಾ ವರ್ಗ, ಎಲ್ಲಾ ಧರ್ಮದಲ್ಲೂ ಇದ್ದಾರೆ. ಯಾರೇ ಮಾಡಿದ್ರು ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆಡದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಡುತ್ತಿದೆ. ಯಾರೇ ತಪ್ಪು ಮಾಡಿದ್ರು ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಇಂತಹ ದುಷ್ಕರ್ಮಿಗಳು ಯಾರೇ ಇದ್ದರೂ ಅವರ ವಿರುದ್ಧ ಖಡಾ ಖಂಡಿತ ಕ್ರಮ ತೆಗೆದುಕೊಳ್ಳಲಾಗುತ್ತದೆ.
ನಾವು ಎಲ್ಲಿ ಓಲೈಕೆ ಮಾಡಿದ್ದೇವೆ? ಕ್ರಮ ತಗೊಂಡಿದ್ದೇವೆ, ಉತ್ತರ ಪ್ರದೇಶ ಸೇರಿ ಅನೇಕ ಕಡೆಗಳಲ್ಲಿ ಗಲಾಟೆಗಳು ಆಗಿಲ್ಲವಾ. ಅಲ್ಲಿ ಆದಾಗ ಕೋಮುವಾದ ಪರ ನಿಲ್ಲುತ್ತಾರೆ. ಇಲ್ಲಿ ನಾವು ನಿಷ್ಪಕ್ಷಪಾತವಾಗಿ ನಡೆದುಕೊಂಡ್ರೂ ಗೂಬೆ ಕೂರಿಸುವ ಕೆಲಸ ಮಾಡ್ತೀರಾ. ನಾವು ಆ ರೀತಿ ಇಲ್ಲ. ಯಾರೇ ತಪ್ಪು ಮಾಡಿದ್ರು ಅವರ ವಿರುದ್ಧ ಕ್ರಮ ತಗೊಳ್ತಿದ್ದೇವೆ. ಇದರಲ್ಲಿ ನಾವು ಎಲ್ಲಿಯೂ ಕೂಡ ಪಕ್ಷಪಾತ ಮಾಡುವ ಪ್ರಶ್ನೇಯೇ ಇಲ್ಲ. ನಾವು ನ್ಯಾಯದ ಪರವಾಗಿ ಇರಬೇಕೇ ಹೊರತು ಯಾವುದೋ ಓಲೈಕೆ ರಾಜಕಾರಣ ಮಾಡೋಕೆ ನಿಂತಿಲ್ಲ ಎಂದು ಕಟುವಾಗಿ ಹೇಳಿದ್ದಾರೆ.
ಇದನ್ನೂ ಓದಿ : ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ಬಿರಿಯಾನಿ ತರಿಸಿಕೊಂಡ ಪ್ರಭಾಸ್ | ನಟನ ‘ಫುಡ್ ಲವ್’ ಜಗಜ್ಜಾಹೀರು



















