ಕಲಬುರಗಿ : ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ನಡೆದಿದೆ.
ರಾವೂರ್ ಗ್ರಾಮದ ಗೋಕುಲ ನಗರದ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಶಿವಾಜಿ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಡಿಜೆ ಹಾಕಿ ಡ್ಯಾನ್ಸ್ ಮಾಡುವ ವೇಳೆ ಮತ್ತೊಂದು ಸಮುದಾಯ ಸೌಂಡ್ ಕಡಿಮೆ ಮಾಡುವಂತೆ ಕಿರಿಕ್ ಮಾಡಿದ್ದು, ಬಳಿಕ ಎರಡು ಸಮುದಾಯದ ನಡುವೆ ಕಟ್ಟಿಗೆ, ಕಲ್ಲುಗಳಿಂದ ಹೊಡೆದಾಟ ನಡೆದಿದೆ.
ಈ ಘಟನೆಯಲ್ಲಿ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎರಡು ಸಮುದಾಯಗಳ ನಡುವೆ ಸಂಧಾನ ಮಾಡಿದ ಹಿನ್ನೆಲೆ ಎರಡೂ ಸಮುದಾಯದ ಕಡೆಯವರು ಯಾವುದೇ ದೂರು ದಾಖಲಿಸಿಲ್ಲ.
ಇದನ್ನೂ ಓದಿ : ಟ್ರಂಪ್‌ಗೆ ಸುಪ್ರೀಂ ಕೋರ್ಟ್ ಶಾಕ್ ಬೆನ್ನಲ್ಲೇ ಭಾರತದ ಮೇಲಿನ ಸುಂಕ ಶೇ.10ಕ್ಕೆ ಇಳಿಕೆ



















