ಬೆಂಗಳೂರು : ರಾಂಗ್ ವೇನಲ್ಲಿ ಬಂದು ರಸ್ತೆ ಅಡ್ಡಗಟ್ಟಿ ಟ್ರಾಫಿಕ್ ಜಾಮ್ ಸೃಷ್ಟಿಸಿದ ಆಟೋ ಚಾಲಕನ ಕಿರಿಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಗರದ ಕನ್ವೆಂಟ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒನ್ ವೇನಲ್ಲಿ ಬಂದ ಆಟೋ ಚಾಲಕ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಇತರ ವಾಹನ ಸವಾರರಿಗೆ ತೊಂದರೆ ಉಂಟುಮಾಡಿದ್ದಾನೆ.
ಟ್ರಾಫಿಕ್ ಜಾಮ್‌ನಲ್ಲಿ ಜನರು ಸಿಕ್ಕಿಹಾಕಿಕೊಂಡಿದ್ದರೂ ಚಾಲಕ ಮಾತ್ರ ನಿರ್ಲಕ್ಷ್ಯವಾಗಿ ವರ್ತಿಸಿದ್ದಾನೆ. ಹಲವರು ಹಾರ್ನ್ ಹೊಡೆದು ದಾರಿ ಬಿಡುವಂತೆ ಮನವಿ ಮಾಡಿದರೂ, ಡೋಂಟ್ ಕೇರ್ ಧೋರಣೆ ತೋರಿಸಿದ್ದಾನೆ.
ಇದಷ್ಟೇ ಅಲ್ಲದೆ, ಆಟೋವನ್ನು ರಸ್ತೆಯಲ್ಲೇ ಬಿಟ್ಟು ಹೊರಗೆ ಬಂದು ಸ್ಟೈಲ್ ಆಗಿ ನಿಂತು ಪೋಸ್ ನೀಡಿದ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತಿವೆ. ಆಟೋದಲ್ಲಿ ಪ್ರಯಾಣಿಕರಿದ್ದರೂ ಅವರಿಗೂ ತೊಂದರೆ ಉಂಟುಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬರುತ್ತಿದೆ.
ಇದನ್ನೂ ಓದಿ : ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು | ಓರ್ವ ಸಾವು


















