ಮಂಗಳೂರು : ನೇಮೋತ್ಸವದ ವೇಳೆ ತನ್ನಿಂದ ತಾನೇ ದೈವದ ಉಯ್ಯಾಲೆ ತೂಗಿರುವುದನ್ನು ಕಂಡ ಭಕ್ತರು ಅಚ್ಚರಿಗೊಂಡಿದ್ದಾರೆ. ಹೌದು.. ಮಂಗಳೂರಿನ ಬೈಕಂಪಾಡಿ ಕೈಗಾರಿಕ ವಲಯದಲ್ಲಿರುವ ಕುಡುಂಬೂರು ನಡುಗಿರಿಯ ಶ್ರೀಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನ ಈ ದೈವ ಪವಾಡಕ್ಕೆ ಸಾಕ್ಷಿಯಾಗಿದೆ.
ಪಿಲಿಚಂಡಿ ನೇಮೋತ್ಸವದಲ್ಲಿ ಉಯ್ಯಾಲೆ ರೀತಿಯ ಮಂಚದಲ್ಲಿ (ಮಣೆ ಮಂಚವು) ದೈವವು ತನ್ನ ಪವಾಡ ತೋರಿದೆ. ಪಿಲಿಚಾಮುಂಡಿ ದೈವದ ನೇಮೋತ್ಸವಕ್ಕೆ ಗಗ್ಗರ ಇಡುವಾಗ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೊಡ್ಡ ಸದ್ದು ಕೇಳಿಬಂದಿದೆ. ಏನು ಎಂದು ನೋಡಲು ಹೋದವರಿಗೆ ಈ ಅಚ್ಚರಿಯಾ ದೃಶ್ಯ ಕಂಡುಬಂದಿದೆ. ನೇಮೋತ್ಸವ ನಡೆಯುತ್ತಿದ್ದ ಜಾಗದ ಮುಂಭಾಗವೇ ಇರುವ ಹೊಳ್ಳರ ಚಾವಡಿಯ ತೂಗುಯ್ಯಾಲೆ ತನ್ನಿಂದ ತಾನೇ ತೂಗಾಡುತ್ತಿರುವುದನ್ನು ಕಂಡ ಭಕ್ತರು ಆಶ್ಚರ್ಯಕ್ಕೊಳಗಾಗಿದ್ದಾರೆ. ಪಿಲಿಚಂಡಿ ದೈವದ ಈ ಕಾರ್ಣಿಕ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧ ಲಂಕಾ ಗೆಲುವಿನ ಹಿಂದಿದೆ ಇಬ್ಬರು ಭಾರತೀಯರ ‘ಮಾಸ್ಟರ್ ಪ್ಲಾನ್’ | ಜಯಸೂರ್ಯ ಹೇಳಿದ್ದೇನು?



















