ಬೀದರ್ : ಮನೆಯ ಮುಂದೆ ಇದ್ದ ಚಂರಡಿಗೆ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಮಲ್ಲಿಕ್‌ಮರ್ಜಾಪುರ ಗ್ರಾಮದಲ್ಲಿ ನಡೆದಿದೆ. ಅವಿನಾಶ್ (5) ಸಾವನ್ನಪ್ಪಿದ ದುರ್ದೈವಿ ಬಾಲಕ.
ಮನೆಯ ಮುಂದೆ ಆಟ ಆಡುವ ವೇಳೆ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ನಿನ್ನೆ ಶುಕ್ರವಾರ ಸಂಜೆ 6 ಗಂಟೆಯಿಂದ ಕಾಣೆಯಾಗಿದ್ದ ಹಿನ್ನೆಲೆ ಕುಟುಂಬಸ್ಥರು ಬಾಲಕನ ಹುಡುಕಾಟದಲ್ಲಿದ್ದರು, ಬಳಿಕ ಚರಂಡಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಕೂಡಲೇ ಗ್ರಾಮಸ್ಥರು ಚರಂಡಿಯಲ್ಲಿ ಬಿದ್ದಿದ್ದ ಬಾಲಕನನ್ನು ಹೊರ ತೆಗೆದಿದ್ದಾರೆ. ಆದರೇ, ಅಷ್ಟರಲ್ಲಾಗಲೆ ಬಾಲಕ ಸಾವನ್ನಪ್ಪಿದ್ದ. ಬಾಲಕನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸಂಬಂಧ ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅಪಾರ್ಟ್ಮೆಂಟ್‌ಗೆ ನುಗ್ಗಿ ಹಣ, ಚಿನ್ನ ದೋಚಿದ ಖರ್ತನಾಕ್ ಕಳ್ಳಿಯರು | ಲೇಡಿ ಗ್ಯಾಂಗ್‌ನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ



















