ಬೀದರ್ : ಜಿಲ್ಲೆಯಲ್ಲಿ ಟೋಯಿಂಗ್ ವಾಹನ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ನೌಬಾದ್ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ನಿನ್ನೆ ಸಂಜೆ 5 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ.
ಅಣದೂರ್ ಕಡೆಗೆ ತೆರಳುತ್ತಿದ್ದ ಆಟೋ ಮತ್ತು ಅಣದೂರ್‌ನಿಂದ ಬೀದರ್ ಕಡೆ ಬರುತ್ತಿದ್ದ ಟೋಯಿಂಗ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಆಟೋದಲ್ಲಿ ಸಾಗಿಸುತ್ತಿದ್ದ ತರಕಾರಿಗಳು ರಸ್ತೆಯುದ್ದಕ್ಕೂ ಚಲ್ಲಾಪಿಲ್ಲಿಯಾಗಿವೆ.
ಅಪಘಾತ ಸಂಭವಿಸಿದ ವೇಳೆ ಆಟೋದಲ್ಲಿ ನಾಲ್ಕೈದು ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಮೂವರು ಗಾಯಗೊಂಡಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳಿಗೆ ತಕ್ಷಣ ನೆರವು ನೀಡಿ ಚಿಕಿತ್ಸೆಗಾಗಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನಗಳ ಡಿಕ್ಕಿಯಿಂದ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.
ಇದನ್ನೂ ಓದಿ : ಹೊಸಕೋಟೆಯಲ್ಲಿ ಬಸ್-ಕಂಟೇನರ್ ಮಧ್ಯೆ ಭೀಕರ ಅಪಘಾತ – ತಪ್ಪಿದ ಭಾರೀ ಅನಾಹುತ!


















