ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಒಂದು ದಿನದ ರಿಲೀಫ್ ಸಿಕ್ಕಿದೆ. ಇಂದು ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯ ತಪಾಸಣೆ ನಡೆಸಲು ತನಿಖಾಧಿಕಾರಿಗೆ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಸೂಚನೆ ನೀಡಿದ್ದು, ಚಿಕಿತ್ಸೆ ಕೊಡಿಸಿದ ಬಳಿಕ ನಾಳೆ ಹಾಜರುಪಡಿಸುವಂತೆ ಸಿಐಡಿಗೆ ಸೂಚಿಸಿದ್ದಾರೆ.
ನಾಳೆ ತಿಂಗಳ ಎರಡನೇ ಶನಿವಾರ ಕೋರ್ಟ್‌ಗೆ ರಜೆ ಇರುವ ಹಿನ್ನೆಲೆ, ತಮ್ಮ ಮನೆಗೆ ಆರೋಪಿಯನ್ನ ಹಾಜರುಪಡಿಸುವಂತೆ ಕೋರ್ಟ್ ತಿಳಿಸಿದೆ. ಹೀಗಾಗಿ ಬೈರತಿ ಬಸವರಾಜ್‌ಗೆ ನ್ಯಾಯಾಂಗ ಬಂಧನವೋ ಅಥವಾ ಪೊಲೀಸ್ ಕಸ್ಟಡಿಯೋ? ಎಂಬ ಭೀತಿ ಕಾಡಿದ್ದು, ನಾಳೆ ಇದಕ್ಕೆ ಉತ್ತರ ಸಿಗಲಿದೆ.
ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ನಿನ್ನೆ ಗುಜರಾತ್ನ ಅಹಮದಾಬಾದ್ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೈರತಿ ಬಸವರಾಜ್ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿತ್ತು. ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ ಅವರು ಆರೋಪಿಯನ್ನ ವಿಚಾರಣೆ ನಡೆಸಿ, ಬಂಧನ ಪ್ರಕ್ರಿಯೆ ನಡೆಸಿದ್ದರು. ಇಂದು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ : ಮಂಗಳೂರು CCB ಪೊಲೀಸರ ಕಾರ್ಯಾಚರಣೆ | ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಮೂವರು ಪೆಡ್ಲರ್‌ಗಳ ಬಂಧನ!


















