ಬೆಂಗಳೂರು: ‘ಡೆವಿಲ್’ ಚಿತ್ರದ ಹಾಡುಗಳಿಂದ ಗಮನ ಸೆಳೆದ ಗಾಯಕ ಅನಿರುದ್ಧ್ ಶಾಸ್ತ್ರಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಅವರೊಂದಿಗೆ ಫೆ.26ರಂದು ಅನಿರುದ್ದ್ ಸಪ್ತಪದಿ ತುಳಿಯಲಿದ್ದಾರೆ.
ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅನಿರುದ್ದ್ ಮತ್ತು ಶ್ರೇಯಾ, ಇದೀಗ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಿದ್ದಾರೆ. ಬಹುಕಾಲದ ಗೆಳತಿಯನ್ನೇ ಜೀವನ ಸಂಗಾತಿಯಾಗಿ ಆರಿಸಿಕೊಂಡಿರುವ ಅನಿರುದ್ದ್, ಈಗಾಗಲೇ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದು, ಜೋಗಿ ನಿರ್ದೇಶಕ ಪ್ರೇಮ್ ಅವರಿಗೂ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಅನಿರುದ್ದ್, ಡೆವಿಲ್ ಚಿತ್ರದ ‘ಅಲೋಹೋಮೊರಾ – ದಿ ಟ್ರೂ ಎಂಪರರ್’ ಹಾಡು ಸೇರಿದಂತೆ, ಕಾಟೇರಾ ಚಿತ್ರದ ಥೀಮ್ ಸಾಂಗ್ ಹಾಗೂ ಕ್ರಾಂತಿ ಚಿತ್ರದಲ್ಲಿ ದರ್ಶನ್ ಅಭಿನಯದ ಹಾಡಿಗೆ ಧ್ವನಿಯಾಗಿದ್ದರು. ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಡೆವಿಲ್ ಗಾಯಕನ ಮದುವೆ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ : ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಮಾವೇಶ ಮಾಡ್ತಿದೆ? | ಆರ್.ಅಶೋಕ್ ಕಿಡಿ



















