ವಿಜಯನಗರ : ಹಂಪಿ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಆನೆಯಾಲದ ಬಳಿ ಹೋಗುವ ದಾರಿಯಲ್ಲಿ ನಡೆದಿದೆ.
ಹೆಜ್ಜೇನು ಕಡಿತಕ್ಕೆ ಕಂಗಾಲಾದ ಪ್ರವಾಸಿಗರು, ವೃದ್ಧರು ಸೇರಿ ಕೆಲವರು ಸ್ಥಳದಿಂದ ಓಡಿ ದೂರ ಸರಿದಿದ್ದಾರೆ. ಟವಲ್ ಮತ್ತು ವೇಲ್‌ಗಳನ್ನು ಮುಚ್ಚಿಕೊಂಡು ಪ್ರಾಣ ರಕ್ಷಣೆಗಾಗಿ ಓಡಿದ್ದಾರೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಿಂದ ಕೆಲಕಾಲ ಹಂಪಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ : ಎಣ್ಣೆ ಏಟಲ್ಲಿ ಕಾರು, ಬೈಕ್‌ಗಳಿಗೆ ಗುದ್ದಿ ಯುವತಿಯರು ಕಿರಿಕ್ | ಕ್ಯಾಬ್ ಚಾಲಕನ ಮೇಲೆ ಹಲ್ಲೆ ಯತ್ನ



















