ಬೀದರ್ : ಬೀದರ್‌ನ ಪಾಪನಾಶ ದೇವಸ್ಥಾನ ಅಭಿವೃದ್ಧಿ ಹೆಸರಲ್ಲಿ ಕೈ-ಕಮಲ ನಾಯಕರ ಜಟಾಪಟಿ ಜೋರಾಗಿದೆ. ಇಂದು ದೇವಸ್ಥಾನ ಜೊರ್ಣೋದ್ಧಾರ ಕಾಮಗಾರಿಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ ಹಿನ್ನೆಲೆ ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿಗೆ ಈಶ್ವರ್ ಖಂಡ್ರೆ ಚಾಲನೆ ಮಾಡದಂತೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಾಪನಾಶ ದೇವಸ್ಥಾನಕ್ಕೆ ಹೋಗುವ ಮೊದಲೇ ಬಿಜೆಪಿ ನಾಯಕರನ್ನ ಪೊಲೀಸರು ಗೇಟ್‌ನಲ್ಲೇ ಬ್ಯಾರಿಕೇಡ್ ಹಾಕಿ ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದಾರೆ. ಬಿಜೆಪಿ ನಾಯಕರು ಬೆಳಿಗ್ಗೆ10ಗಂಟೆಗೆ ಪಾಪನಾಶ ಲಿಂಗ ದೇವರಿಗೆ ಅಭಿಷೇಕ, ಪೂಜೆ ಹಮ್ಮಿಕೊಂಡಿದ್ದರು. ಆದರೆ, ಪೊಲೀಸರು ತಡೆದ ಹಿನ್ನೆಲೆ ಮಾಜಿ ಸಚಿವ ಭಗವಂತ ಖೂಬಾ, ಶಾಸಕರಾದ ಸಿದ್ದು ಪಾಟೀಲ್, ಶೈಲೇಂದ್ರ ಬೆಲ್ದಾಳೆ, ಪ್ರಕಾಶ್ ಖಂಡ್ರೆ, ಸೋಮನಾಥ ಪಾಟೀಲ್ ಸೇರಿ ನೂರಾರು ಕಾರ್ಯಕರ್ತರು ರಸ್ತೆಯಲ್ಲೇ ನಿಲ್ಲುವಂತಾಗಿದೆ.
ಶಾಸಕ ಸಿದ್ದು ಪಾಟೀಲ್, ಶೈಲೇಂದ್ರ ಬೆಲ್ದಾಳೆ ದೇವಸ್ಥಾನಕ್ಕೆ ಹೋಗಬಾರದಂತೆ ಆದೇಶ ಎಲ್ಲಿದೆ ತೋರಿಸಿ ಎಂದು ಅಧಿಕಾರಿಗಳನ್ನ ಪ್ರಶ್ನಿಸಿ, ನಾವೇನು ಪಾಕಿಸ್ತಾನದವ್ರಾ, ಹಿಂದೂಸ್ತಾನದವ್ರಾ ಎಂದು ಸಿದ್ದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಪೊಲೀಸರು ಮತ್ತು ಶಾಸಕರ ಮಧ್ಯೆ ಮಾತಿನ ಚಕಮಕಿನಡೆದಿದ್ದು, ದೇವರ ದರ್ಶನಕ್ಕೆ ಬಿಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದ ಎಎಸ್‌ಪಿ ಚಂದ್ರಕಾಂತ್ ಪೂಜಾರಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕರು ಜೈಶ್ರೀರಾಮ್, ಹರಹರ ಮಹಾದೇವ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾ ನಿರತ ಶಾಸಕ ಸಿದ್ದು ಪಾಟೀಲ್, ಶೈಲೇಂದ್ರ ಬೆಲ್ದಾಳೆ ಹಾಗೂ ಬಿಜೆಪಿ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸರು ಮಿನಿ ಬಸ್‌ನಲ್ಲಿ ಕರೆದೊಯ್ದಿದಿದ್ದಾರೆ. ಹೀಗೆ ಯಾಕೆ ಮಾಡ್ತಿದ್ದೀರಿ ಗುಂಡಿನಿಂದ ಹೊಡೆದು ಹಾಕಿ, ಇದು ಯಾವ ನ್ಯಾಯ ಎಂದು ಪೊಲೀಸರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇವಲ ರಸ್ತೆ, ಕಟ್ಟಡಕ್ಕೆ ಅನುದಾನ ಕೊಟ್ಟರೆ ಸಾಲದು ಸರ್ಕಾರ ಜಾನಪದಕ್ಕೂ ಅನುದಾನ ಕೊಡಬೇಕು | ಟಿ.ಎಸ್.ನಾಗಭರಣ



















