ಬೆಂಗಳೂರು ಗ್ರಾಮಂತಾರ : ಜಾನಪದಕ್ಕೆ ಸರ್ಕಾರ ಅನುದಾನ ಕೊಡಬೇಕು. ಕೇವಲ ರಸ್ತೆ, ಕಟ್ಟಡಕ್ಕೆ ಅನುದಾನ ಕೊಟ್ಟರೆ ಸಾಲದು. ಜಾನಪದವೇ ಈ ನೆಲದ ಮೂಲವಾಗಿದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಪರೋಕ್ಷವಾಗಿ ಸರ್ಕಾರದ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ರಾಮನಗರದಲ್ಲಿರುವ ಜಾನಪದ ಲೋಕದಲ್ಲಿ ಎರಡು ದಿನಗಳ ಕಾಲ ನಡೆಯುವ ಜಾನಪದ ಲೋಕೋತ್ಸವವನ್ನು ಉದ್ಘಾಟನೆ ಮಾಡಿ, ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಟಿ.ಎಸ್.ನಾಗಭರಣ, ಜಾನಪದಕ್ಕೆ ಸರ್ಕಾರ ಅನುದಾನ ಕೊಡಬೇಕು. ನಾನೇನು ಒತ್ತಾಯ ಮಾಡುವುದಿಲ್ಲ ಅವರಿಗೆ ಕಣ್ಣಿಲ್ವಾ? ಸರ್ಕಾರಕ್ಕೆ ಗೊತ್ತಿಲ್ವಾ? ಬೇರಿಗೆ ನೀರು ಹಾಕಿದರೆ ಫಲ ಅಲ್ವಾ? ಸರ್ಕಾರದ ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳು ಸಹ ಸಹಾಯ ಮಾಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಮಠದ ಅನ್ನದಾನೇಶ್ವರ ಸ್ವಾಮೀಜಿ, ಸಿಎಂ ಪತ್ರಿಕಾ ಕಾರ್ಯದರ್ಶಿ ಪ್ರಭಾಕರ್ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ; ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ, ಡಿಕೆಶಿ ಹೇಳಿದ್ರೆ ಪ್ರಾಣ ಕೊಡೋದಕ್ಕೂ ರೆಡಿ | ಶಿವಗಂಗಾ ಬಸವರಾಜ್



















