ಚಾಮರಾಜನಗರ | ಸಂಸದ ಸುನಿಲ್ ಬೋಸ್‌ಗೆ ಮಹಿಳೆಯೊಬ್ಬರು ಫೇಸ್ ಬುಕ್‌ನಲ್ಲಿ ಕೊಟ್ಟ ವಾರ್ನಿಂಗ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಧು ಹೊಲೆಯಾರ್ ಹೆಸರಿನ ಮಹಿಳೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಮೆಸೇಜ್ ಸಕ್ಕತ್ ವೈರಲ್ ಆಗಿ ನಂತರ ಡಿಲೀಟ್ ಆಗಿದೆ.

‘ಚಾಮರಾಜನಗರ ಸಂಸದರೇ ನನ್ನ ಕಾಲ್ ಪಿಕ್ ಮಾಡ್ತೀರಾ.. ಇಲ್ಲಾ ಅಂದ್ರೆ FB ಲೈವ್‌ನಲ್ಲೇ ಹೇಳಬೇಕಾದ ವಿಷಯವನ್ನೆಲ್ಲಾ ಹೇಳಲಾ? ಎಂಬ ಸಂದೇಶ ಈಕೆಯ ಖಾತೆಯಲ್ಲಿ ಅಪ್ ಲೋಡ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದಲ್ಲದೆ, ಕೆಲ ಸಮಯದಲ್ಲೇ ಮೆಸೇಜ್ ಡಿಲೀಟ್ ಆಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸಂಸದ ಸುನಿಲ್ ಬೋಸ್‌ಗೂ ಈಕೆಗೂ ಇರುವ ಸಂಬಂಧವಾದ್ರೂ ಏನು? ಕಾಲ್ ಪಿಕ್ ಮಾಡ್ಲಿಲ್ಲ ಅಂದ್ರೆ ಲೈವ್‌ನಲ್ಲಿ ವಿಷಯವನ್ನೆಲ್ಲಾ ಹೇಳಲಾ? ಎಂಬ ಎಚ್ಚರಿಕೆಯ ಸಂದೇಶ ಅಪ್ ಲೋಡ್ ಮಾಡಿರುವ ಉದ್ದೇಶವೇನು? ಅಪ್‌ಲೋಡ್ ಮಾಡಿದ ಕೆಲವೇ ಸಮಯಕ್ಕೆ ಡಿಲೀಟ್ ಮಾಡಿದ ಕಾರಣವಾದ್ರೂ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.
ಫೇಸ್ ಬುಕ್ ಖಾತೆಯಲ್ಲಿ ರಾಜಕಾರಿಣಿಗಳು ಹಾಗೂ ಅಧಿಕಾರಿಗಳ ಬಗ್ಗೆ ಸಾಕಷ್ಟು ವಿಮರ್ಶೆಗಳನ್ನ ಮಾಡಿರುವ ಈಕೆ, ಸಂಸದ ಸುನಿಲ್ ಬೋಸ್‌ಗೆ ಈ ರೀತಿ ವಾರ್ನಿಂಗ್ ಕೊಡುವ ಮರ್ಮ ಏನು ಗೊತ್ತಿಲ್ಲ. ಒಟ್ಟಾರೆ ಸಂಸದರ ಆಪ್ತ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಈ ವಿಚಾರ ಭಾರೀ ಚರ್ಚಗೆ ಗ್ರಾಸವಾಗಿದೆ.
ಇದನ್ನೂ ಓದಿ : ಮತ್ತೊಂದು ಹನಿಮೂನ್ ಮರ್ಡರ್ | ಪ್ರಿಯತಮನ ಜೊತೆಗೂಡಿ ಪತಿಯನ್ನೇ ಮುಗಿಸಿದ ಕಿರಾತಕಿ



















