ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ
ಗಾನವಿ (15) ಮೃತ ವಿದ್ಯಾರ್ಥಿನಿ. ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದ ವಿದ್ಯಾರ್ಥಿನಿ ಅಂತಿಮ ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಮೊದಲ ಪ್ರಿಪರೇಟರಿ ಪರೀಕ್ಷೆಯಲ್ಲಿ ಮೃತ ಗಾನವಿ 500ಕ್ಕೆ 93 ಅಂಕ ಪಡೆದಿದ್ದಳು. ಹಾಗಾಗಿ ಕಳೆದ 20 ರಂದು ವಿದ್ಯಾರ್ಥಿನಿ ಗಾನವಿ ಮನೆಗೆ ಕಡೂರು ಬಿಇಓ ತಿಮ್ಮಪ್ಪ ರಾತ್ರಿ 9:30 ರ ಸಮಯಕ್ಕೆ ಭೇಟಿ ನೀಡಿದ್ದರು.
ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿಯಲ್ಲೇ ಇರುತ್ತಿದ್ದ ಗಾನವಿ, ಎರಡು ದಿನಗಳ ಹಿಂದೆ ಅವರೆ ಕಾಳಿಗೆ ಹಾಕುವ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಾನವಿ ಸಾವನ್ನಪ್ಪಿದ್ದಾಳೆ.
ಸದ್ಯ ಈ ಘಟನಾ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾವೇರಿ | ಕರ್ಜಗಿ ಜಾತ್ರೆಯಲ್ಲಿ ತಲೆಎತ್ತಿದ ಅಕ್ರಮ ಜೂಜು ಅಡ್ಡೆಗಳು ; ಪೊಲೀಸರ ಗಮನಕ್ಕೆ ಬಂದರೂ ಡೋಂಟ್ ಕೇರ್!



















